ರಾಜ್ಯದಲ್ಲಿ ಕೊರೋನ ಸೋಂಕಿತರ ಸಂಖ್ಯೆ 445 ಕ್ಕೆ ಏರಿಕೆ
ಗುರುವಾರ 18 ಹೊಸ ಪ್ರಕರಣಗಳು ದೃಢ

ಬೆಂಗಳೂರು, ಎ.23: ರಾಜ್ಯದಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ 445ಕ್ಕೆ ಏರಿಕೆಯಾಗಿದ್ದು, ಅವುಗಳ ಪೈಕಿ 17 ಮಂದಿ ಮೃತಪಟ್ಟಿದ್ದು, 145 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.
ಒಟ್ಟಾರೆ ಸೋಂಕಿತರಲ್ಲಿ ಸಕ್ರಿಯ ಪ್ರಕರಣಗಳ ಪೈಕಿ 283 ವ್ಯಕ್ತಿಗಳಲ್ಲಿ 278 ರೋಗಿಗಳು ಗೊತ್ತುಪಡಿಸಿದ ಆಸ್ಪತ್ರೆಗಳ ಪ್ರತ್ಯೇಕ ವಾರ್ಡ್‍ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರ ಆರೋಗ್ಯವು ಸ್ಥಿರವಾಗಿರುತ್ತದೆ. ಐದು ಮಂದಿಯನ್ನು ಐಸಿಯುನಲ್ಲಿಡಲಾಗಿದೆ.
ಸೋಂಕಿತರ ವಿವರ:
ರೋಗಿ 428: ವಿಜಯಪುರ ಜಿಲ್ಲೆಯ 32 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿರುವ ರೋಗಿ 221 ಸಂಪರ್ಕಿತರಾಗಿದ್ದಾರೆ.
ರೋಗಿ 429: ವಿಜಯಪುರ ಜಿಲ್ಲೆಯ 25 ವರ್ಷದ ಮಹಿಳೆಯಾಗಿದ್ದು, ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ.
ರೋಗಿ 430: ಹುಬ್ಬಳ್ಳಿ-ಧಾರವಾಡ ಜಿಲ್ಲೆಯ 30 ವರ್ಷದ ಮಹಿಳೆಯಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿರುವ ರೋಗಿ 236 ಸಂಪರ್ಕಿತರಾಗಿದ್ದಾರೆ.
ರೋಗಿ 431: ಹುಬ್ಬಳ್ಳಿ-ಧಾರವಾಡ ಜಿಲ್ಲೆಯ 13 ವರ್ಷದ ಬಾಲಕಿಯಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿರುವ ರೋಗಿ 236 ಸಂಪರ್ಕಿತರಾಗಿದ್ದಾರೆ.
ರೋಗಿ 432: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ 78 ವರ್ಷದ ಮಹಿಳೆಯಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿರುವ ರೋಗಿ 390 ರ ಸಂಪರ್ಕಿತರಾಗಿದ್ದಾರೆ.
ರೋಗಿ 433: ಬೆಂಗಳೂರು ನಗರ ಜಿಲ್ಲೆಯ 30 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿರುವ ರೋಗಿ 419 ರ ಸಂಪರ್ಕಿತ ವ್ಯಕ್ತಿಯಾಗಿದ್ದಾರೆ.
ರೋಗಿ 434: ಬೆಂಗಳೂರು ನಗರ ಜಿಲ್ಲೆಯ 30 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿರುವ ರೋಗಿ 419 ರ ಸಂಪರ್ಕಿತ ವ್ಯಕ್ತಿಯಾಗಿದ್ದಾರೆ.
ರೋಗಿ 435: ಬೆಂಗಳೂರು ನಗರ ಜಿಲ್ಲೆಯ 22 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿರುವ ರೋಗಿ 419 ರ ಸಂಪರ್ಕಿತ ವ್ಯಕ್ತಿಯಾಗಿದ್ದಾರೆ.
ರೋಗಿ 436: ಬೆಂಗಳೂರು ನಗರ ಜಿಲ್ಲೆಯ 40 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿರುವ ರೋಗಿ 419 ರ ಸಂಪರ್ಕಿತ ವ್ಯಕ್ತಿಯಾಗಿದ್ದಾರೆ.
ರೋಗಿ 437: ಬೆಂಗಳೂರು ನಗರ ಜಿಲ್ಲೆಯ 30 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿರುವ ರೋಗಿ 419 ರ ಸಂಪರ್ಕಿತ ವ್ಯಕ್ತಿಯಾಗಿದ್ದಾರೆ.
ರೋಗಿ 438: ಬೆಂಗಳೂರು ನಗರ ಜಿಲ್ಲೆಯ 25 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿರುವ ರೋಗಿ 419 ರ ಸಂಪರ್ಕಿತ ವ್ಯಕ್ತಿಯಾಗಿದ್ದಾರೆ.
ರೋಗಿ 439: ಬೆಂಗಳೂರು ನಗರಜಿಲ್ಲೆಯ 37 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿರುವ ರೋಗಿ 419 ರ ಸಂಪರ್ಕಿತ ವ್ಯಕ್ತಿಯಾಗಿದ್ದಾರೆ.
ರೋಗಿ 440: ಬೆಂಗಳೂರು ನಗರಜಿಲ್ಲೆಯ 43 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿರುವ ರೋಗಿ 419 ರ ಸಂಪರ್ಕಿತ ವ್ಯಕ್ತಿಯಾಗಿದ್ದಾರೆ.
ರೋಗಿ 441: ಬೆಂಗಳೂರು ನಗರ ಜಿಲ್ಲೆಯ 24 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿರುವ ರೋಗಿ 419 ರ ಸಂಪರ್ಕಿತ ವ್ಯಕ್ತಿಯಾಗಿದ್ದಾರೆ.
ರೋಗಿ 442: ಮಂಡ್ಯ ಜಿಲ್ಲೆಯ 47 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿರುವ ರೋಗಿ 171 ಮತ್ತು 371 ಸಂಪರ್ಕಿತರಾಗಿದ್ದಾರೆ.
ರೋಗಿ 443: ಮಂಡ್ಯ ಜಿಲ್ಲೆಯ ಮಳವಳ್ಳಿಯ 28 ವರ್ಷದ ಮಹಿಳೆಯಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿರುವ ರೋಗಿ 179 ರ ಸಂಪರ್ಕಿತ ವ್ಯಕ್ತಿಯಾಗಿದ್ದಾರೆ.
ರೋಗಿ 444: ಬೆಂಗಳೂರು ನಗರ ಜಿಲ್ಲೆಯ 41 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿರುವ ರೋಗಿ 252 ರ ಸಂಪರ್ಕಿತ ವ್ಯಕ್ತಿಯಾಗಿದ್ದಾರೆ.
ರೋಗಿ 445: ಕಲಬುರಗಿ ಜಿಲ್ಲೆಯ 32 ವರ್ಷದ ಪುರುಷರಾಗಿದ್ದು, ಈ ಹಿಂದೆ ಸೋಂಕು ದೃಢಪಟ್ಟಿರುವ ರೋಗಿ 413 ರ ಸಂಪರ್ಕಿತ ವ್ಯಕ್ತಿಯಾಗಿದ್ದಾರೆ.
ಆರೋಗ್ಯ ಸೇವೆ ಕಾರ್ಯಕರ್ತರ ಮೇಲಿನ ಹಲ್ಲೆಯನ್ನು ಮತ್ತು ಇತ್ಯಾದಿ ಘಾತಕ ಚಟುವಟಿಕೆಯಲ್ಲಿ ತೊಡಗಿದ ವ್ಯಕ್ತಿಗಳಿಗೆ ಕನಿಷ್ಟ 3 ತಿಂಗಳಿನಿಂದ 5 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ಕನಿಷ್ಟ 50 ಸಾವಿರದಿಂದ 2 ಲಕ್ಷದವರೆಗಿನ ದಂಡವನ್ನು ನಿಗದಿಪಡಿಸಲಾಗಿದೆ.
ರಾಜ್ಯಾದ್ಯಂತ ಎಲ್ಲ ಔಷಧ ವಿತರಕರು ಔಷಧಿಗಳನ್ನು ಖರೀದಿಸುವ ಗ್ರಾಹಕರುಗಳ ವಿವರವನ್ನು ನಿರ್ವಹಣೆ ಮಾಡುವುದು ಕಡ್ಡಾಯವಾಗಿರುತ್ತದೆ.
ಬೆಂಗಳೂರಿನ ಎಲ್ಲ ಮಾಧ್ಯಮ ಹಾಗೂ ಪತ್ರಕರ್ತರನ್ನು ಕೋವಿಡ್ 19 ತಪಾಸಣೆ ಹಾಗೂ ಪರೀಕ್ಷೆಯನ್ನು ಕೈಗೊಳ್ಳಲು ಸೂಚಿಸಲಾಗಿದೆ. ಯಾವುದೇ ಬೋಧಕ ಹಾಗೂ ಬೋಧಕೇತರ ಶಿಕ್ಷಕರುಗಳ ವೇತನವನ್ನು ತಡೆ ಹಿಡಿಯಬಾರದು. ಯಾವುದೇ ಸಿಬ್ಬಂದಿಯನ್ನು ಕೆಲಸದಿಂದ ವಜಾ ಮಾಡಬಾರದು. ವಿದ್ಯಾರ್ಥಿಗಳು ಕಂತಿನ ರೂಪದಲ್ಲಿ ಶುಲ್ಕಗಳನ್ನು ಕಟ್ಟಲು ಅನುಮೋದಿಸಲಾಗಿದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.







