ಲಾಕ್‌ಡೌನ್ ನಿರ್ಬಂಧ: ಮೇ 3ರವರೆಗೆ ಯಥಾಸ್ಥಿತಿ ಮುಂದುವರಿಕೆ- ಕೋಟ
ಮಂಗಳೂರು, ಎ.23: ಕೊರೋನ ಸೋಂಕು ರೋಗ ತಡೆಗಟ್ಟುವ ನಿಟ್ಟಿನಲ್ಲಿ ವಿಧಿಸಲಾದ ಲಾಕ್‌ಡೌನ್‌ನ ಹಾಲಿ ನಿರ್ಬಂಧವು ರಾಜ್ಯಾದ್ಯಂತ ಇರುವಂತೆ ದ.ಕ.ಜಿಲ್ಲೆಯಲ್ಲೂ ಮೇ 3ರವರೆಗೆ ಮುಂದುವರಿಯಲಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಗುರುವಾರ ದ.ಕ.ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ನಿರ್ಬಂಧದ ಕುರಿತು ಸಭೆ ನಡೆಸಿದ ಸಚಿವರು, ಮೇ 3ರವರೆಗೆ ಯಾವುದೇ ಸಡಿಲಿಕೆ ಇಲ್ಲ. ಎಂದಿನಂತೆ ಬೆಳಗ್ಗೆ 7ರಿಂದ ಮಧ್ಯಾಹ್ನ 12ರವರೆಗೆ ಅಂಗಡಿಮುಂಗಟ್ಟುಗಳು ಕಾರ್ಯಾಚರಿಸಲಿದೆ ಎಂದರು.
1 ಪಾಸಿಟಿವ್ ಪತ್ತೆಯೊಂದಿಗೆ ವೃದ್ಧೆಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಸೂಕ್ತ ಮುನ್ನೆಚ್ಚರಿಕೆ ಕ್ರಮ ವಹಿಸುವಂತೆ ಅಧಿಕಾರಿ ವರ್ಗಕ್ಕೆ ಸಚಿವ ಕೋಟ ಸೂಚನೆ ನೀಡಿದ್ದಾರೆ.
Next Story





