ನನಗಿಷ್ಟವಾದ ಪುಸ್ತಕ ಖರೀದಿಸುವ ಅಭ್ಯಾಸವಿದೆ: ಕುಮಾರಸ್ವಾಮಿ

ಬೆಂಗಳೂರು, ಎ. 23: 'ನನ್ನ ಮನೆಯಲ್ಲಿ ನನ್ನದೇ ಆದ ಪುಟ್ಟ ಖಾಸಗಿ ಲೈಬ್ರರಿ ಇದೆ. ನೂರಾರು ಕನ್ನಡ ಮತ್ತು ಇಂಗ್ಲಿಷ್ ಪುಸ್ತಕಗಳ ಸಂಗ್ರಹವಿದೆ. ಈಗ ನಾನು ಓದುತ್ತಿರುವುದು ಲಾಲ್ ಬಹದ್ದೂರು ಶಾಸ್ತ್ರಿ ಅವರ 'ಎ ಲೈಫ್ ಆಫ್ ಟ್ರೂತ್ ಇನ್ ಪಾಲಿಟಿಕ್ಸ್' ಪುಸ್ತಕ' ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎಲ್ಲ ಪುಸ್ತಕ ಪ್ರೇಮಿಗಳಿಗೆ ವಿಶ್ವ ಪುಸ್ತಕ ದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.
ಗುರುವಾರ ಸರಣಿ ಟ್ವೀಟ್ ಮಾಡಿರುವ ಅವರು, `ಪುಸ್ತಕ ಮೇಳಗಳಿಗೆ ಹೋಗಿ ನನಗಿಷ್ಟವಾದ ಪುಸ್ತಕಗಳನ್ನು ಖರೀದಿಸುವ ಅಭ್ಯಾಸವೂ ಇದೆ. ಪುಸ್ತಕ ಓದಿದ ನಂತರ ಇಷ್ಟದ ಲೇಖಕರೊಂದಿಗೆ ಚರ್ಚಿಸುವ ಅಭ್ಯಾಸವೂ ಇದೆ. ಬೋಳುವಾರು ಮಹಮದ್ ಅವರ `ಸ್ವಾತಂತ್ರ್ಯದ ಓಟ' ಕಾದಂಬರಿ ಓದಿದ ನಂತರ ಅವರೊಂದಿಗೆ ದೂರವಾಣಿಯಲ್ಲಿ ಚರ್ಚಿಸಿದ್ದೆ. ಆರಂಭದಲ್ಲಿ ಅವರು ನಂಬಲು ಸಿದ್ಧರಿರಲಿಲ್ಲ' ಎಂದು ತಿಳಿಸಿದ್ದಾರೆ.
Next Story





