ಟೆಂಪೋ ಢಿಕ್ಕಿ: ಪಾದಚಾರಿ ಸಾವು
ಕಾಪು : ಪಾದಚಾರಿಗೆ ಟೆಂಪೋ ಡಿಕ್ಕಿ ಹೊಡೆದ ಪರಿಣಾಮ ಪಾದಚಾರಿ ಸಾವನ್ನಪ್ಪಿದ ಘಟನೆ ಕಾಪುವಿನ ವಿದ್ಯಾನಿಕೇತನ್ ಶಾಲೆಯ ಬಳಿ ಶುಕ್ರವಾರ ಮುಂಜಾನೆ ನಡೆದಿದೆ.
ಗದಗ ಮಡಿವಾಳ ಮೂಲದ ಕಿರಣ್ (24) ಎಂಬಾತ ಮೃತಪಟ್ಟಿದ್ದು, ಈತ ತನ್ನ ಸಹೋದರನೊಂದಿಗೆ ಕಾಪು ಪರಿಸರದಲ್ಲಿ ಎರಡು ವರ್ಷದಿಂದ ಕೂಲಿ ಕೆಲಸ ಮಾಡಿಕೊಂಡಿದ್ದರು. ಶುಕ್ರವಾರ ಮುಂಜಾನೆ ನಡೆದುಕೊಂಡು ಹೋಗುತಿದ್ದಾಗ ರಾಷ್ಟ್ರೀಯ ಹೆದ್ದಾರಿ 66ರ ವಿದ್ಯಾನಿಕೇತನ ಶಾಲೆಯ ಬಳಿ ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ತರಕಾರಿ ಕೊಂಡೊಯ್ಯುತಿದ್ದ ವಾಹನ ಢಿಕ್ಕಿ ಹೊಡೆಯಿತು. ತೀವ್ರ ಗಾಯಗೊಂಡ ಅವರನ್ನು ಕೂಡಲೇ ಉಡುಪಿಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಮೃತಪಟ್ಟರು. ಪ್ರಕರಣ ಕಾಪು ಠಾಣೆಯಲ್ಲಿ ದಾಖಲಾಗಿದೆ.
Next Story





