ಕೊರೋನ ಜೊತೆಗೆ ಮಲೇರಿಯ ಸಾವಿನ ಸಂಖ್ಯೆ ದ್ವಿಗುಣ
ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ

ಜಿನೀವ (ಸ್ವಿಟ್ಸರ್‌ಲ್ಯಾಂಡ್),ಎ.24: ನೂತನ-ಕೊರೋನವೈರಸ್ ಸಾಂಕ್ರಾಮಿಕದಿಂದಾಗಿ, ಸಬ್-ಸಹಾರನ್ ಆಫ್ರಿಕದಲ್ಲಿ ಮಲೇರಿಯ ನಿಗ್ರಹ ಬಲೆ ಮತ್ತು ಔಷಧಿಗಳ ತೀವ್ರ ಅಭಾವ ಕಾಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಗುರುವಾರ ಎಚ್ಚರಿಸಿದೆ. ಇವುಗಳ ಉತ್ಪಾದನೆ ಹಾಗೂ ಪೂರೈಕೆಗೆ ತುರ್ತು ಗಮನ ನೀಡದಿದ್ದರೆ ಮಲೇರಿಯದಿಂದಾಗಿ ಸಂಭವಿಸುವ ಸಾವುಗಳ ಪ್ರಮಾಣ ದುಪ್ಪಟ್ಟುಗೊಳ್ಳಬಹುದು ಎಂದು ಅದು ಹೇಳಿದೆ.
ಮಲೇರಿಯ ನಿಯಂತ್ರಣ ಮತ್ತು ಚಿಕಿತ್ಸಾ ಪರಿಕರಗಳನ್ನು ಈಗಲೇ ಕ್ಷಿಪ್ರವಾಗಿ ವಿತರಿಸುವಂತೆ ವಿಶ್ವ ಆರೋಗ್ಯ ಸಂಸ್ಥೆಯು ಸಬ್ ಸಹಾರನ್ ಆಫ್ರಿಕ ಉಪಖಂಡದ ದೇಶಗಳಿಗೆ ಕರೆ ನೀಡಿದೆ. ಇಲ್ಲಿ ಜಗತ್ತಿನ ಸುಮಾರು 95 ಶೇಕಡ ಮಲೇರಿಯ ಪ್ರಕರಣಗಳು ಮತ್ತು ಸಾವುಗಳು ಸಂಭವಿಸುತ್ತವೆ.
Next Story





