ಕೆಎಂಸಿಯಲ್ಲಿ ಸುರಕ್ಷಾ ಕ್ರಮದೊಂದಿಗೆ ನಿರಂತರ ರಕ್ತದಾನ

ಮಣಿಪಾಲ, ಎ.25: ಕೋವಿಡ್-19 ಹಾಗೂ ಲಾಕ್‌ಡೌನ್‌ನಿಂದಾಗಿ ಉಡುಪಿ ಜಿಲ್ಲೆಯಲ್ಲಿ ಕೆಲವು ಗುಂಪಿನ ರಕ್ತದ ಕೊರತೆ ಕಾಣಿಸಿಕೊಂಡಿದ್ದು, ರಕ್ತದಾನಿಗಳು ಲಾಕ್‌ಡೌನ್‌ನಿಂದಾಗಿ ಮನೆಯಿಂದ ಹೊರಬರಲು ಸಾಧ್ಯವಾಗದಿ ರುವುದು ಮತ್ತು ಕೋವಿಡ್-19ರಿಂದಾಗಿ ಜನ ರಕ್ತದಾನಕ್ಕೆ ಹಿಂದೇಟು ಹಾಕುತ್ತಿರುವುದು ಇದಕ್ಕೆ ಪ್ರಮುಖ ಕಾರಣ ಎಂದು ವಿಶ್ಲೇಷಿಲಾಗಿದೆ.
ಕಳೆದ ಕೆಲವು ದಿನಗಳಿಂದ ಉಡುಪಿಯ ಪ್ರಮುಖ ಆಸ್ಪತ್ರೆಗಳಲ್ಲಿ ರಕ್ತದ ಕೊರತೆ ವಿಶೇಷವಾಗಿದ್ದು ಇದರಿಂದ ಹಲವು ಶುಶ್ರೂಷೆಗಳು ವಿಳಂಬವಾ ಗುತ್ತಿರುವ ವರದಿಗಳಿವೆ. ರಕ್ತದಾನ ಕೊರತೆ ಇನ್ನೂ ಇದೇ ರೀತಿ ಮುಂದುವರಿದರೆ ಕೆಲವು ಶಸ್ತ್ರಚಿಕಿತ್ಸೆಗಳು ವಿಳಂಬವಾಗುವ ಸಾಧ್ಯತೆ ಇದೆ ಎಂದು ಆಸ್ಪತ್ರೆಗಳ ತಜ್ಞ ವೈದ್ಯರು ಆತಂಕ ವ್ಯಕ್ತಪಡಿಸುತಿದ್ದಾರೆ.
ಇದೇ ಕಾರಣಕ್ಕಾಗಿ ಮಣಿಪಾಲ ಕೆಎಂಸಿಯ ರಕ್ತನಿಧಿ ವಿಭಾಗ ರಕ್ತದಾನಿಗಳಿಗೆ ಬೇಕಾದ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಲು ಬರುವವರಿಗೆ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಿಕೊಡುತಿದ್ದಾರೆ. ರಕ್ತದಾನಿ ಗಳಿಗೆ ವಾಹನದ ಸಮಸ್ಯೆ ಇದ್ದಲ್ಲಿ ಮಣಿಪಾಲ ಕೆಎಂಸಿ ರಕ್ತನಿಧಿ ವಿಭಾಗಕ್ಕೆ ಬಂದು ಹೋಗಲು ಮಣಿಪಾಲದಿಂದ ಸರಾಸರಿ 10ಕಿ.ಮಿ.ವರೆಗೆ ವಾಹನದ ವ್ಯವ ಸ್ಥೆಯನ್ನು ಸಹ ಮಾಡಲಾಗುತ್ತಿದೆ.
ಇದರಿಂದ ಕಳೆದ ಸುಮಾರು ಹತ್ತು ದಿನಗಳಿಂದ ಪ್ರತೀದಿನ ಸರಾಸರಿ 5 ಯೂನಿಟ್‌ನಂತೆ ಒಟ್ಟು ಸುಮಾರು 50 ಯೂನಿಟ್ ರಕ್ತ ಸಂಗ್ರಹವಾಗಿದೆ ಎಂದು ರಕ್ತದಾನಕ್ಕಾಗಿಯೇ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪಡೆದಿರುವ ಸತೀಶ್ ಸಾಲಿಯಾನ್ ಮಾಹಿತಿ ನೀಡಿದ್ದಾರೆ. ಅವರು ಶುಕ್ರವಾರ ಕೆಎಂಸಿ ರಕ್ತನಿಧಿ ಕೇಂದ್ರದಲ್ಲಿ ಆಯೋಜಿಸಲಾದ ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದರು.
ರಕ್ತದಾನಿಗಳಾದ ಶಿವಪ್ರಸಾದ್ ಇಂದಿರಾನಗರ, ಪ್ರಶಾಂತ್ ಶೆಟ್ಟಿಗಾರ್, ಸಂಜಿತ್, ಶರತ್ ಕುಮಾರ್, ಶೇಖರ್ ಕುಂದರ್, ಆದರ್ಶ್ ರಾಜೀವ್ ನಗರ, ಶ್ರೀಕಾಂತ್, ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ, ಎಂಐಟಿ ಮಣಿಪಾಲದ ಪ್ರಾದ್ಯಾಪಕ ಬಾಲಕೃಷ್ಣ ಮದ್ದೋಡಿ, ರಕ್ತನಿಧಿ ಕೇಂದ್ರದ ಮುಖ್ಯಸ್ಥೆ ಡಾ.ಶಮಿ ಶಾಸ್ತ್ರಿ, ವಿಶ್ವೇಶ್ ಮುಂತಾದವರು ಉಪಸ್ಥಿತರಿದ್ದರು.







