ಬಿಜೆಪಿಯಿಂದ ‘ಕಿಟ್’ ರಾಜಕೀಯ: ಐವನ್ ಆರೋಪ
ಮಂಗಳೂರು, ಎ.25: ರಾಜ್ಯದಲ್ಲಿ ಕೊರೋನ ವೈರಸ್ ತಡೆಗಟ್ಟಲು ಕಾಂಗ್ರೆಸ್ ಪಕ್ಷ ಎಲ್ಲಾ ರೀತಿಯ ಸಹಕಾರವನ್ನು ಆಡಳಿತ ಪಕ್ಷಕ್ಕೆ ನೀಡಿದೆ. ಜನಜಾಗೃತಿಯನ್ನು ಮಾಡಿದೆ. ಕಷ್ಟದಲ್ಲಿರುವವರಿಗೆ ಸ್ಪಂದಿಸಿದೆ. ಆದರೆ ಬಿಜೆಪಿ ಜಾತಿ ಆಧಾರದಲ್ಲಿ ಕಿಟ್‌ಗಳನ್ನು ವಿತರಿಸುತ್ತದೆ. ಪಕ್ಷದ ಆಧಾರ ದಲ್ಲಿ ಸಹಾಯವನ್ನು ಮಾಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಆರೋಪಿಸಿದೆ.
ಬಿಜೆಪಿಗರು ಕೊರೋನ ವೈರಸ್ ನಿರ್ಮೂಲನೆ ಮಾಡುವುದನ್ನು ಬಿಟ್ಟು ಪಕ್ಷ ಕಟ್ಟಲು ಕೊರೋನ ಹಣವನ್ನು ಉಪಯೋಗಿಸುತ್ತೀದೆ. ಹೆಣವನ್ನು ಮುಂದಿಟ್ಟುಕೊಂಡು ರಾಜಕಾರಣ ಮಾಡುತ್ತಿದೆ. ಹಿಂದುಗಳು ಒಂದು ಎನ್ನುವ ಬಿಜೆಪಿ ಸತ್ತ ಮೇಲೆ ಹೆಣವನ್ನು ಸುಡಲು ಬಿಡುವುದಿಲ್ಲ ಎಂದರೆ ಬಿಜೆಪಿಯ ವ್ಯಾಘ್ರತನ ಎಷ್ಟು ಎಂದು ತಿಳಿಸುತ್ತದೆ. ರಾಜ್ಯ ಸರಕಾರ ಕೊರೋನ ನಿಗ್ರಹಕ್ಕೆ ಎಷ್ಟು ಹಣ ಬಿಡುಗಡೆ ಮಾಡಿದೆ. ಯಾವ ಉದ್ದೇಶ ಕ್ಕಾಗಿ ಬಳಸಲಾಗಿದೆ ಎಂಬುದನ್ನು ಸಹ ಜನರಿಗೆ ತಿಳಿಸಬೇಕಿದೆ ಎಂದು ಐವನ್ ಡಿಸೋಜ ತಿಳಿಸಿದ್ದಾರೆ.
ಕೊರೋನ ವೈರಸ್ ತಡೆಗಟ್ಟಲು ರಾಜ್ಯ ಸರಕಾರ ಸಂಪೂರ್ಣ ವಿಫಲಗೊಳ್ಳುತ್ತಿದೆ ಎಂಬುದಕ್ಕೆ ದ.ಕ.ಜಿಲ್ಲೆಯಲ್ಲಿ ನಡೆದ ಘಟನೆಯೇ ಸಾಕು. ಕೊರೋನ ವೈರಸ್ ತಡೆಗಟ್ಟುವ ಬದಲು ಬಿಜೆಪಿಯ ಮಂತ್ರಿಗಳಲ್ಲಿ ಪೈಪೋಟಿ ಶುರುವಾಗಿದೆ ಎಂದು ಐವನ್ ಡಿಸೋಜ ಆಪಾದಿಸಿದ್ದಾರೆ.





