ಕುದ್ರೋಳಿ ಮೂಲದ ವ್ಯಕ್ತಿ ದುಬೈಯಲ್ಲಿ ನಿಧನ

ಮಂಗಳೂರು, ಎ.25: ಮೂಲತಃ ಕುದ್ರೋಳಿಯ ಪ್ರಸ್ತುತ ಬೋಳಾರ ಸಮೀಪದ ಮುಳಿಹಿತ್ಲು ಬಳಿ ವಾಸವಾಗಿದ್ದ ಇತ್ಹಿಶಾಮ್ (45)ಎಂಬವರು ದುಬೈಯಲ್ಲಿ ಶನಿವಾರ ಮುಂಜಾನೆ ನಿಧನರಾಗಿದ್ದಾರೆ.
ದುಬೈಯಲ್ಲಿ ಉದ್ಯೋಗಿಯಾಗಿದ್ದ ಇವರು ಕೆಲವು ದಿನಗಳ ಹಿಂದೆ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಅವರ ಕುಟುಂಬಸ್ಥರು ಪತ್ರಿಕೆಗೆ ತಿಳಿಸಿದ್ದಾರೆ.
ಮೂಲತಃ ಕುದ್ರೋಳಿಯ ಜಾಮೀಯಾ ಮಸೀದಿ ಸಮೀಪದ ನಿವಾಸಿಯಾಗಿದ್ದ ಇವರ ಕುಟುಂಬವು ಬಳಿಕ ಬೋಳಾರದ ಮುಳಿಹಿತ್ಲು ಬಳಿ ನೆಲೆಸಿತ್ತು. ಕಳೆದ ಡಿಸೆಂಬರ್‌ನಲ್ಲಿ ಮಂಗಳೂರಿಗೆ ಬಂದಿದ್ದ ಇವರು ನ್ಯುಮೋನಿಯಾದಿಂದ ಬಳಲುತ್ತಿದ್ದರು. ಚೇತರಿಕೆಗೊಂಡ ಬಳಿಕ ಜನವರಿಯಲ್ಲಿ ದುಬೈಗೆ ತೆರಳಿದ್ದರು. ಆದರೆ ಅಲ್ಲೂ ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಫಲಾಕಾರಿಯಾಗದೆ ಕೊನೆಯುಸಿರೆಳೆದರು ಎಂದು ತಿಳಿದು ಬಂದಿದೆ.
ಮೃತರು ಪತ್ನಿ ಮತ್ತು ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಹಾಗೂ ಅಪಾರ ಕುಟುಂಬಸ್ಥರನ್ನು ಅಗಲಿದ್ದಾರೆ.
Next Story





