ಬ್ರಿಟನ್: ಭಾರತ ಮೂಲದ ವೈದ್ಯರಿಗೆ ಕೊರೋನ ಸೋಂಕು ಅಪಾಯ ಹೆಚ್ಚು ಸಮೀಕ್ಷೆ
ಲಂಡನ್, ಎ. 25: ಭಾರತೀಯ ಮತ್ತು ಜನಾಂಗೀಯ ಅಲ್ಪಸಂಖ್ಯಾತ ಹಿನ್ನೆಲೆಗಳ ವೈದ್ಯಕೀಯ ಮತ್ತು ಆರೋಗ್ಯರಕ್ಷಣೆ ಸಿಬ್ಬಂದಿ ಬ್ರಿಟನ್‌ನಲ್ಲಿ ಕೊರೋನವೈರಸ್ ಸೋಂಕಿಗೆ ಒಳಗಾಗುವ ಅತಿ ಹೆಚ್ಚಿನ ಅಪಾಯವನ್ನು ಎದುರಿಸುತ್ತಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ಆರೋಗ್ಯ ಸಿಬ್ಬಂದಿ ಎದುರಿಸುತ್ತಿರುವ ಅಪಾಯಗಳು ಮತ್ತು ಅವರ ಕಳವಳಗಳ ಬಗ್ಗೆ ಅಧ್ಯಯನ ಮಾಡುವುದಕ್ಕಾಗಿ ಭಾರತ ಮೂಲದ ಬ್ರಿಟಿಶ್ ವೈದ್ಯರ ಸಂಘದ ಸಂಶೋಧನಾ ಘಟಕವು ಎಪ್ರಿಲ್ 14 ಮತ್ತು 21ರ ನಡುವೆ ನಡೆಸಿದ ಒಂದು ವಾರದ ಅವಧಿಯ ಆನ್‌ಲೈನ್ ಸಮೀಕ್ಷೆಯಲ್ಲಿ ಈ ಅಭಿಪ್ರಾಯಕ್ಕೆ ಬರಲಾಗಿದೆ.
ಸಮೀಕ್ಷೆಗೆ ಎಲ್ಲ ಹಿನ್ನೆಲೆಗಳ 2,003 ಮಂದಿ ಪ್ರತಿಕ್ರಿಯಿಸಿದರು. ಅವರ ಪೈಕಿ ಹೆಚ್ಚಿನವರು (66 ಶೇಕಡ) ಆಸ್ಪತ್ರೆಗಳ ವೈದ್ಯರು ಹಾಗೂ 24 ಶೇಕಡ ಮಂದಿ ಪ್ರಾಥಮಿಕ ಚಿಕಿತ್ಸೆ ನೀಡುವವರು.
ಸೂಕ್ತ ವೈಯಕ್ತಿಕ ರಕ್ಷಣಾ ಸಲಕರಣೆ (ಪಿಪಿಇ)ಗಳಿಲ್ಲದಿರುವುದು ವೈದ್ಯಕೀಯ ಸಿಬ್ಬಂದಿಯ ಪ್ರಮುಖ ಕಳವಳವಾಗಿದೆ ಎಂದು ಸಮೀಕ್ಷೆಯಲ್ಲಿ ಗೊತ್ತಾಗಿದೆ.
Next Story





