ನೂತನ ಮುಖ್ಯ ಜಾಗ್ರತ ಆಯುಕ್ತರಾಗಿ ಸಂಜಯ ಕೊಠಾರಿ ಪ್ರಮಾಣ ವಚನ

ಹೊಸದಿಲ್ಲಿ,ಎ.25: ಸಂಜಯ ಕೊಠಾರಿ ಅವರು ಶನಿವಾರ ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ನೂತನ ಮುಖ್ಯ ಜಾಗ್ರತ ಆಯುಕ್ತ (ಸಿವಿಸಿ)ರಾಗಿ ಪ್ರಮಾಣ ವಚನ ಸ್ವೀಕರಿಸಿದರು.
1978ರ ತಂಡದ (ನಿವೃತ್ತ) ಐಎಎಸ್ ಅಧಿಕಾರಿ ಕೊಠಾರಿ ಅವರಿಗೆ ರಾಷ್ಟ್ರಪತಿ ರಾಮನಾಥ ಕೋವಿಂದ್ ಅವರು ಪ್ರಮಾಣ ವಚನವನ್ನು ಬೋಧಿಸಿದರು. ಪ್ರಧಾನಿ ನರೇಂದ್ರ ಮೋದಿ,ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಮತ್ತು ಇತರ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಎಲ್ಲರೂ ಕೋವಿಡ್-19 ನಿಯಮಗಳನ್ನು ಪಾಲಿಸಿದ್ದರು. ಮೋದಿ ಕಾಟನ್ ಸ್ಕಾರ್ಫ್‌ನ್ನು ಮುಖಕ್ಕೆ ಸುತ್ತಿಕೊಂಡಿದ್ದರೆ ಇತರ ಅತಿಥಿಗಳು ಮಾಸ್ಕ್‌ಗಳನ್ನು ಧರಿಸಿದ್ದರು. ಕುರ್ಚಿಗಳನ್ನು ದೂರವಿಡುವ ಮೂಲಕ ಸುರಕ್ಷಿತ ಅಂತರವನ್ನೂ ಕಾಯ್ದುಕೊಳ್ಳಲಾಗಿತ್ತು.
ಕೊಠಾರಿ ಅವರು ಈವರೆಗೆ ರಾಷ್ಟ್ರಪತಿಗಳ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
Next Story





