ಅಕ್ರಮ ಮದ್ಯ ಮಾರಾಟ: ಇಬ್ಬರ ಬಂಧನ
ಬಂಟ್ವಾಳ, ಎ. 25: ಅಕ್ರಮವಾಗಿ ಮದ್ಯ ಮಾರಾಟದ ಆರೋಪದಲ್ಲಿ ಪುಂಜಾಲಕಟ್ಟೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ ಮದ್ಯವನ್ನು ವಶಕ್ಕೆ ಪಡೆದಿದ್ದಾರೆ.
ತಾಲೂಕಿನ ಬಡಗಕಜೆಕಾರು ಗ್ರಾಮದ ಪಾರೊಟ್ಟು ನಿವಾಸಿಗಳಾದ ಶೋಭಾ (42) ಮತ್ತು ಸಂದೇಶ ಯಾನೆ ಮುನ್ನ(31) ಬಂಧಿತ ಆರೋಪಿಗಳಾಗಿದ್ದಾರೆ.
ಬಡಗಕಜೆಕಾರು ಗ್ರಾಮದ ಮಾಡ ಎಂಬಲ್ಲಿಯ ಸಾರ್ವಜನಿಕ ಸ್ಥಳದಲ್ಲಿ ಆರೋಪಿ ಶೋಭಾ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದು ಸಂದೇಶ ಮದ್ಯ ಸೇವನೆಗೆಂದು ಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳಿಂದ ಮೈಸೂರು ಲ್ಯಾನ್ಸರ್, ವಿಸ್ಕಿ, ಮದ್ಯ ತುಂಬಿದ ಸ್ಯಾಚೇಟ್, ಅರ್ಧ ಮದ್ಯ ಉಳಿದ ಮೈಸೂರು ಲ್ಯಾನ್ಸರ್ ವಿಸ್ಕಿ, ಗಾಜಿನ ಗ್ಲಾಸ್ ಹಾಗೂ ಪ್ಲಾಸ್ಟಿಕ್ ಚೀಲವನ್ನು ಸ್ವಾಧೀನಗೊಳಿಸಿಕೊಂಡು ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





