ಲಾಕ್‍ಡೌನ್ ನಡುವೆ ಕಲಬುರಗಿಯಲ್ಲಿ ರಥೋತ್ಸವ: ಪೊಲೀಸ್ ಇಲಾಖೆ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ

ಬೆಂಗಳೂರು, ಎ.25: ಕಲಬುರಗಿ ಜಿಲ್ಲೆಯ ರಾವೂರ್ ಮತ್ತು ಭೂಸನೂರಿನಲ್ಲಿ ರಥೋತ್ಸವ ಆಚರಿಸಿದ ಆಯೋಜಕರ ವಿರುದ್ಧ ಸರಿಯಾದ ಸೆಕ್ಷನ್‍ಗಳ ಅಡಿ ದೂರು ದಾಖಲಿಸಿಲ್ಲ ಎಂದು ಹೈಕೋರ್ಟ್ ಪೊಲೀಸ್ ಇಲಾಖೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಈ ಕುರಿತು ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯನ್ಯಾಯಮೂರ್ತಿ ಎ.ಎಸ್.ಓಕಾ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ರಥೋತ್ಸವ ಆಚರಿಸಿದ ಆಯೋಜಕರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಿಸಬೇಕಿತ್ತು. ಆದರೆ, ಎಫ್‍ಐಆರ್ ನಲ್ಲಿ ಈ ಕಾಯ್ದೆಯ ಸೆಕ್ಷನ್‍ನಡಿ ದೂರು ದಾಖಲಿಸಿಕೊಂಡಿಲ್ಲ. ಕೇವಲ ಐಪಿಸಿ ಸೆಕ್ಷನ್ ಅಡಿ ಪ್ರಕರಣ ದಾಖಲಿಸಿರೋದೇಕೆ ? ಈ ಬಗ್ಗೆ ಸರಕಾರ ವಿವರಣೆ ನೀಡಬೇಕೆಂದು ಹೈಕೋರ್ಟ್ ಸೂಚನೆ ನೀಡಿತು. ಅಲ್ಲದೇ, ಎಷ್ಟು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂಬುದರ ಬಗ್ಗೆಯೂ ವಿವರಣೆ ನೀಡಬೇಕೆಂದು ಸರಕಾರಕ್ಕೆ ಸೂಚನೆ ನೀಡಿತು.
Next Story





