ಯೋಚನಾಶೀಲ ಯುವಕರಿಗೆ ಅರ್ಜುನ್ ಪೂಂಜಾ ಮಾದರಿ : ಶಾಸಕ ಯು.ಟಿ.ಖಾದರ್
ಕೈಯಿಂದ ಮುಟ್ಟದೆ ಬಳಸುವ ಸ್ಯಾನಿಟೈಸರ್ ಡಿಸ್ಪೆಂಸರ್ ಅಭಿವೃದ್ಧಿ

ಬಂಟ್ವಾಳ, ಎ.26: ಯುವಕರು ಕ್ರಿಯಾತ್ಮಕವಾಗಿ ಯೋಚಿಸಿ ತಮ್ಮ ಯೋಚನೆಗಳನ್ನು ಕಾರ್ಯರೂಪಕ್ಕೆ ತಂದಾಗ ಸಮಾಜಕ್ಕೆ ಒಳಿತಾಗುವ ಬಹಳಷ್ಟು ಅವಕಾಶಗಳು ಒದಗಿಬರುತ್ತದೆ. ಇಂತಹ ಯೋಚನಾಶೀಲ ಯುವಕರಿಗೆ ಅರ್ಜುನ್ ಪೂಂಜಾ ಮಾದರಿ ಎಂದು ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.
ಕೈಯಿಂದ ಮುಟ್ಟದೆ ಬಳಸುವ ಸ್ಯಾನಿಟೈಸರ್ ಡಿಸ್ಪೆಂಸರ್ (ನಿರ್ಮಲಿಕಾರಕ ಉಪಕರಣ)ಅನ್ನು ಅಭಿವೃದ್ಧಿ ಪಡಿಸಿರುವ ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ, ಯುವ ಇಂಜಿನಿಯರ್ ಅರ್ಜುನ್ ಕೆ. ಪೂಂಜಾರನ್ನು ಫರಂಗಿಪೇಟೆಯಲ್ಲಿ ರವಿವಾರ ಅಭಿನಂದಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಅವರು ಕೈಯಿಂದ ಮುಟ್ಟದೆ ಬಳಸುವ ಸ್ಯಾನಿಟೈಸರ್ ಡಿಸ್ಪೆಂಸರ್ ಅನ್ನು ಸಾರ್ವಜನಿಕರ ಸೇವೆಗೆ ಬಿಡುಗಡೆಗೊಳಿಸಿದರು.
ಈ ಸಂದರ್ಭ ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ಸುರೇಶ್ ರೈ ಪೆಲಪಾಡಿ, ಕಾರ್ಯಕರ್ತರಾದ ಸುಕುಮಾರ್ ಬಂಗೇರ, ಸುಕೇಶ್ ಶೆಟ್ಟಿ ತೇವು, ವಿಕ್ರಮ್ ಬರ್ಕೆ, ಎಫ್ ಗಣೇಶ್ ಕುಮಾರ್, ಲೋಕೇಶ್ ಕಲ್ಲತಡಮೆ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಉಮರ್ ಫಾರೂಕ್, ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.







