ಅಮ್ಮೆಂಬಳದ ಮಹಿಳೆ ಬಹರೈನ್‌ನಲ್ಲಿ ನಿಧನ
ಮಂಗಳೂರು, ಎ.26: ಬೋಳಿಯಾರ್ ಗ್ರಾಮದ ಅಮ್ಮೆಂಬಳದ ಮಹಿಳೆಯೊಬ್ಬರು ಬಹರೈನ್‌ನಲ್ಲಿ ರವಿವಾರ ಸಂಜೆ ನಿಧನರಾಗಿದ್ದು ಲಾಕ್‌ಡೌನ್ ಹಿನ್ನೆಲೆಯಲ್ಲಿ ಕುಟುಂಬ ಸಂಕಷ್ಟಕ್ಕೆ ಸಿಲುಕಿದೆ.
ಬೋಳಿಯಾರ್ ಗ್ರಾಮದ ಅಮ್ಮೆಂಬಳ ಜಮಾಅತ್ ಅಧ್ಯಕ್ಷ ಬಿ. ಉಬೈದ್‌ರ ಸಹೋದರಿ ಬಿ.ಶಂಶಾದ್ ಅಮ್ಮೆಂಬಳ (36) ಹೃದಯಾಘಾತದಿಂದ ಮೃತಪಟ್ಟವರು.
ಇವರ ಪತಿ ಕಿನ್ಯ ಪಂಜಲದ ಮುಹಮ್ಮದ್ ರಫೀಕ್ ಬಹರೈನ್‌ನಲ್ಲಿ ಉದ್ಯೋಗದಲ್ಲಿದ್ದಾರೆ. ಮೂವರು ಮಕ್ಕಳ ಸಹಿತ ಇವರು ಬಹರೈನ್‌ನಲ್ಲಿ ವಾಸವಾಗಿದ್ದರು. ಮೃತರ ಮೂವರು ಸಹೋದರರು ದಮಾಮ್ ಮತ್ತು ರಿಯಾದ್‌ನಲ್ಲಿದ್ದಾರೆ. ಆದರೆ ಲಾಕ್‌ಡೌನ್ ಹಿನ್ನೆಲೆಯಲ್ಲಿ ಆಚೀಚೆ ಸಂಪರ್ಕಿಸಲು ಸಾಧ್ಯವಾಗದೆ ಮೃತದೇಹವನ್ನು ಊರಿಗೆ ತರಲು ಸಾಧ್ಯವಾಗುತ್ತಿಲ್ಲ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Next Story





