ಸುದ್ದಿಗೋಷ್ಠಿಯಿಂದ ಸಮಯ ವ್ಯರ್ಥ ಎಂದ ಟ್ರಂಪ್!

ವಾಶಿಂಗ್ಟನ್,ಎ.26: ಅಮೆರಿಕದಲ್ಲಿ ಕೊರೋನ ವೈರಸ್ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 25 ಸಾವಿರವನ್ನು ದಾಟಿದ್ದರೂ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಂಕಿನ ಹಾವಳಿ ಬಗ್ಗೆ ಪತ್ರಿಕಾ ಗೋಷ್ಛಿಗಳನ್ನು ನಡೆಸುವುದರಿಂದ ತನ್ನ ಸಮಯ ವ್ಯರ್ಥವಾಗುತ್ತದೆ ಎಂದು ಹೇಳುವ ಮೂಲಕ ಮತ್ತೊಮ್ಮೆ ವಿವಾದದ ಕಿಡಿ ಹಚ್ಚಿದ್ದಾರೆ. ಎರಡು ದಿನಗಳ ಹಿಂದೆ ಅವರು ಕೊರೋನ ವೈರಸ್ ಸೋಂಕನ್ನು ನಾಶಪಡಿಸುವುದಕ್ಕಾಗಿ ರೋಗಿಗಳಿಗೆ ಸೋಕುನಿರೋಧಕ ದ್ರಾವಣವನ್ನು ಚುಚ್ಚಬೇಕೆಂದು ಹೇಳಿಕೆ ನೀಡಿರುವದುಉ ಕೋಲಾಹಲ ಸೃಷ್ಟಿಸಿತ್ತು.
ಇದೀಗ ಕೊರೋನಾ ವೈರಸ್ ಹಾವಳಿಯನ್ನು ನಿಭಾಯಿಸುವ ವಿಚಾರದಲ್ಲಿ ಸುದ್ದಿಗಾರರು ಕೇಳುವ ಪ್ರಶ್ನೆಗಳಿಂದ ರೋಸಿಹೋಗಿರುವ ಟ್ರಂಪ್,ೋಂಕಿನ ಕುರಿತ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಲು ತಾನು ಪ್ರತಿ ದಿನ ಸಂಜೆ ಎರಡು ಗಂಟೆಗೂ ಅಧಿಕ ಸಮಯವನ್ನು ವ್ಯರ್ಥ ಮಾಡುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.
‘‘ ವಿಶ್ವಸನೀಯವಲ್ಲದ ಮಾಧ್ಯಮಗಳು ಕೇವಲ ದ್ವೇಷಭರಿತ ಪ್ರಶ್ನೆಗಳನ್ನು ಕೇಳುತ್ತವೆ ಮತ್ತು ಆನಂತರ ಸತ್ಯ ಅಥವಾ ವಾಸ್ತವಂಶಗಳನ್ನು ನಿಖರವಾಗಿ ವದಿ ಮಾಡಲು ನಿರಾಕರಿಸುತ್ತವೆ. ಹೀಗಾಗಿ ಶ್ವೇತಭವನದಲ್ಲಿ ಪತ್ರಿಕಾಗೋಷ್ಠಿಗಳನ್ನು ನಡೆಸುವುದರ ಉದ್ದೇಶವಾದರೂ ಏನಿದೆ’’ಎಂದು ಟ್ರಂಪ್ ಟ್ವೀಟ್ ಮಾಡಿದ್ದಾರೆ.
ಅವರು (ಮಾಧ್ಯಮಗಳು) ದಾಖಲೆಯ ರೇಟಿಂಗ್‌ಗಳನ್ನು ಪಡೆಯುತ್ತವೆ. ಆದರೆ ಅಮೆರಿಕದ ಜನತೆಗೆ ನಕಲಿ ಸುದ್ದಿಗಲ್ಲದೆ, ಬೇರೇನನ್ನೂ ದೊರೆೆಯುವುದಿಲ್ಲ ಎಂದು ಟ್ರಂಪ್ ಟ್ವೀಟಿಸಿದ್ದಾರೆ.
ಗುರುವಾರದ ಸುದ್ದಿಗೋಷ್ಠಿಯಲ್ಲಿ ಟ್ರಂಪ್ ಅವರು ಕೋವಿಡ್-19 ಚಿಕಿತ್ಸೆಗಾಗಿ ವೈದ್ಯರು ಸೋಂಕಿತರ ದೇಹಕ್ಕೆ ಅಲ್ಟ್ರಾವಾಯೆಲೆಟ್ ಕಿರಣಗಳನ್ನು ಹಾಯಿಸಲಿದ್ದಾರೆ ಅಥವಾ ಅವರ ದೇಹಕ್ಕೆ ಮನೆ ಬಳಕೆಯ ಸೋಂಕು ನಿರೋಧಕ ದ್ರಾವಣದ ಲಸಿಕೆಗನ್ನು ಚುಚ್ಚಲಿದ್ದಾರೆಂದು ಹೇಳಿದ್ದರು.







