ಹಿರಿಯ ಕಾಂಗ್ರೆಸ್ ನಾಯಕ ಬದ್ರುದ್ದೀನ್ ಶೇಖ್ ಕೊರೋನ ವೈರಸ್ ಗೆ ಬಲಿ
ಅಹ್ಮದಾಬಾದ್: ಹಿರಿಯ ಕಾಂಗ್ರೆಸ್ ನಾಯಕ ಹಾಗೂ ಅಹ್ಮದಾಬಾದ್‍ನ ಕಾರ್ಪೊರೇಟರ್ ಬದ್ರುದ್ದೀನ್ ಶೇಖ್ ಅವರು ಕೋವಿಡ್-19 ಸೋಂಕಿಗೆ ತುತ್ತಾಗಿ ರವಿವಾರ ಕೊನೆಯುಸಿರೆಳೆದಿದ್ದಾರೆ. ಅವರನ್ನು ನಗರದ ಎಸ್‍ವಿಪಿ ಆಸ್ಪತ್ರೆಗೆ ಎಂಟು ದಿನಗಳ ಹಿಂದೆ ದಾಖಲಿಸಲಾಗಿತ್ತು.
ಕಾಂಗ್ರೆಸ್ ನಾಯಕ ಶಕ್ತಿಸಿಂಗ್ ಗೋಹಿಲ್ ತಮ್ಮ ಸ್ನೇಹಿತನ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
“ನನ್ನ ಸ್ನೇಹಿತ #ಬದ್ರು ಓರ್ವ ನಿಜವಾದ #ಕೊರೋನವಾರಿಯರ್. ಅವರು ಅಹ್ಮದಾಬಾದ್‍ನಲ್ಲಿ ಬಡವರಿಗೆ ಸಹಾಯ ಮಾಡುತ್ತಿರುವ ವೇಳೆ ಕೊರೋನ ಸೋಂಕಿಗೆ ತುತ್ತಾಗಿದ್ದರು. ಅವರು ಕೊರೋನವೈರಸ್‍ಗೆ ಬಲಿಯಾಗಿರುವುದು ನಮಗೆ ದೊಡ್ಡ ನಷ್ಟ. ಎಲ್ಲರಿಗೂ ಪಾಠ, ಎಚ್ಚರಿಕೆಯಿಂದಿರಿ, ಸ್ಥಳೀಯ ಪ್ರಾಧಿಕಾರಗಳೊಂದಿಗೆ ಸಹಕರಿಸಿ” ಎಂದವರು ಟ್ವೀಟ್ ಮಾಡಿದ್ದಾರೆ.
My friend #Badru was a true #CoronaWarrior . He got infected with #coronavirus whilst helping poor people in #Ahmedabad #Gujarat .He is a big loss to our @INCGujarat family as he succumbed to #Covid_19 . Lesson for all: Please take care and co operate with your local authorities. pic.twitter.com/52B0Ie4FDi
— Shaktisinh Gohil (@shaktisinhgohil) April 26, 2020