ವಿಜಯಪುರ ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ 41ಕ್ಕೆ ಏರಿಕೆ

ಸಾಂದರ್ಭಿಕ ಚಿತ್ರ
ವಿಜಯಪುರ, ಎ.27: ನಗರದಲ್ಲಿ ಸೋಮವಾರ ಮತ್ತೆ ಇಬ್ಬರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 41 ಕ್ಕೆ ಏರಿದೆ.
ಸೋಮವಾರದ ಇಬ್ಬರಿಗೆ ಸೋಂಕು ದೃಢಪಟ್ಟಿದ್ದು, ರೋಗಿ 221 ಸೋಂಕಿತೆಯಿಂದ 45 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ಆದರೆ ಹೊಸದಾಗಿ ಸೋಂಕು ದೃಢಪಟ್ಟಿರುವ 27 ವರ್ಷದ ಯುವಕನ ಸಂಪರ್ಕ ಪತ್ತೆ ತಲೆನೋವಾಗಿದೆ. ಸೋಂಕಿತ ಯುವಕನ ಸೋಂಕು ಸಂಪರ್ಕ ಪತ್ತೆಗಾಗಿ ಜಿಲ್ಲಾಡಳಿತ ಈತನ ಟ್ರಾವೆಲ್ ಹಿಸ್ಟರಿ ಸಂಗ್ರಹಕ್ಕೆ ಮುಂದಾಗಿದೆ.
ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಯಾವುದೇ ಸೋಂಕು ಪತ್ತೆಯಾಗಿರಲಿಲ್ಲ. ರವಿವಾರ ಜಿಲ್ಲೆಯ ಮೊದಲ ಸೋಂಕಿತ ವೃದ್ಧೆ ಸಂಪೂರ್ಣ ಗುಣಮುಖವಾಗಿ ಮನೆಗೆ ತೆರಳುವ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಕುಸಿತವಾಗಿತ್ತು. ಇದರ ಬೆನ್ನಲ್ಲೇ ಮೊದಲ ಸೋಂಕಿತೆಯ ಸಂಪರ್ಕದಿಂದ ಒಂದು ಹಾಗೂ ಸಂಪರ್ಕದ ಪ್ರಾಥಮಿಕ ಮಾಹಿತಿ ಇಲ್ಲದ ಯುವಕನಿಗೆ ಸೋಂಕು ದೃಢಪಟ್ಟಿದೆ.
Next Story





