ಮನೆಯ ಮುಂದೆ ಬಿದ್ದಿದ್ದ ನೂರು ರೂ. ಮುಖಬೆಲೆಯ ನೋಟು: ಜನರಲ್ಲಿ ಆತಂಕ

ಮೈಸೂರು,ಎ.27: ಮನೆಯ ಮುಂದೆ ಬಿದ್ದಿದ್ದ ನೂರು ರೂ. ಮುಖಬೆಲೆಯ ನೋಟೊಂದು ಆತಂಕ ಸೃಷ್ಟಿಸಿದ ಘಟನೆ ನಗರದ ರಾಮಕೃಷ್ಣನಗರದ ಐ ಬ್ಲಾಕ್‍ನಲ್ಲಿ ನಡೆದಿದೆ.
ರಾಮಕೃಷ್ಣನಗರದ ಐ ಬ್ಲಾಕ್ ನಿವಾಸಿ ರಂಗನಾಥ್ ಎಂಬವರ ಮನೆಯ ಮುಂದೆ ನೂರು ರೂ. ಮುಖ ಬೆಲೆಯ ನೋಟೊಂದು ಬಿದ್ದಿತ್ತು. ರಂಗನಾಥ್ ತಮ್ಮ ಅಕ್ಕಪಕ್ಕದ ಮನೆಯವರಲ್ಲಿ ಯಾರಾದರೂ ನೂರು ರೂ. ಬೀಳಿಸಿದ್ದೀರಾ ಎಂದು ವಿಚಾರಿಸಿದ್ದಾರೆ. ಎಲ್ಲರೂ ತಮ್ಮದಲ್ಲವೆಂದು ತಿಳಿಸಿದ್ದಾರೆ. ಕೂಡಲೇ ಕುವೆಂಪು ನಗರ ಠಾಣೆಯ ಪೊಲೀಸರಿಗೆ ಪೋನ್ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.
ನಂತರ ಮಹಾನಗರ ಪಾಲಿಕೆ ಅಧಿಕಾರಿಗಳು ಸ್ಥಳಕ್ಕಾಗಮಿಸಿ ಸ್ಯಾನಿಟೈಸರ್ ಮಾಡುವ ಮೂಲಕ ನೋಟನ್ನು ಎತ್ತಿಕೊಂಡು ಪರಿಶೀಲನೆಗೆ ಕೊಂಡೊಯ್ದಿದ್ದಾರೆ.
ಕುವೆಂಪುನಗರ ಠಾಣೆಯ ಎಎಸ್‍ಐ ಕಾಂತರಾಜು ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರೀಶೀಲಿಸಿದರು.
Next Story





