ಲೌಕ್‌ಡೌನ್ ಉಲ್ಲಂಘಿಸಿ ಮೆಹಂದಿ: ಪ್ರಕರಣ ದಾಖಲು
ಶಂಕರನಾರಾಯಣ, ಎ.27: ಸಿದ್ದಾಪುರ ಗ್ರಾಮದ ಜನ್ಸಾಲೆ ಎಂಬಲ್ಲಿ ಎ. 25ರಂದು ರಾತ್ರಿ ಲಾಕ್‌ಡೌನ್ ಆದೇಶ ಉಲ್ಲಂಘಿಸಿ ವಿವಾಹ ಪೂರ್ವ ಮೆಹಂದಿ ಕಾರ್ಯಕ್ರಮ ನಡೆಸಿರುವುದರ ವಿರುದ್ಧ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜನ್ಸಾಲೆಯ ಶಿವರಾಮ ಕುಲಾಲ್ ಎಂಬವರ ಮನೆಯಲ್ಲಿ ಅವರ ಮಗ ಮಂಜುನಾಥ ಕುಲಾಲ್ ಅವರ ವಿವಾಹ ಪೂರ್ವ ಮೆಹಂದಿ ಕಾರ್ಯಕ್ರಮ ವನ್ನು ನಡೆಸಿದ್ದು, ಇದರಲ್ಲಿ ಸುಮಾರು 15ರಿಂದ 20 ಮಂದಿ ಸೇರಿದ್ದರು ಎನ್ನಲಾಗಿದೆ. ಇದು ಜಿಲ್ಲಾಧಿಕಾರಿಗಳು ಕೋವಿಡ್-19 ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಯಲು ಮಾಡಿರುವ ಆದೇಶದ ಉಲ್ಲಂಘನೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅದರಂತೆ ಠಾಣೆಯಲ್ಲಿ ಕಲಂ: 269 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.
Next Story





