ಮಹೇಂದ್ರ ಕುಮಾರ್ ರಿಗೆ ದೀಪ ಹಚ್ಚಿ ಗೌರವ ಸಲ್ಲಿಸಿದ ರಾಜ್ಯದ ಜನತೆ

ಚಿಕ್ಕಮಗಳೂರು, ಎ.27: ಇತ್ತೀಚಿಗೆ ಹೃದಯಾಘಾತದಿಂದ ನಿಧನರಾದ ಬಜರಂಗದಳ ಮಾಜಿ ರಾಜ್ಯ ಸಂಚಾಲಕ, ಚಿಂತಕ, ಸಾಮಾಜಿಕ ಕಾರ್ಯಕರ್ತ ಮಹೇಂದ್ರ ಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸುವ ಸಲುವಾಗಿ ರಾಜ್ಯದ ಜನತೆ ದೀಪ ಹಚ್ಚಿ ಗೌರವ ಸಲ್ಲಿಸಿದ್ದಾರೆ.
ಮಹೇಂದ್ರ ಕುಮಾರ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ರಾತ್ರಿ 8 ಗಂಟೆಗೆ ಮನೆ ಮುಂದೆಯೇ ದೀಪ/ಕ್ಯಾಂಡಲ್ ಹಚ್ಚಿ ಪ್ರಾರ್ಥಿಸಲು 'ನಮ್ಮ ಧ್ವನಿ' ಬಳಗ ಕರೆ ನೀಡಿತ್ತು. ಕರೆಗೆ ಸ್ಪಂದಿಸಿದ ಹಲವರು ಮನೆ ಮುಂದೆ ದೀಪ ಹಚ್ಚಿದ್ದಾರೆ.
ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು, ಲೇಖಕ ಯೋಗೇಶ್ ಮಾಸ್ಟರ್, ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಸೇರಿ ಹಲವರು ದೀಪ ಹಚ್ಚಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ.










.jpg)


