ಎ.28,29: ನೀರು ಪೂರೈಕೆ ಸ್ಥಗಿತ
ಮಂಗಳೂರು, ಎ.27: ಮಂಗಳೂರು ಮಹಾನಗರಪಾಲಿಕೆಯ ನೀರು ಸರಬರಾಜು ವ್ಯವಸ್ಥೆಯ ತುಂಬೆ ಸ್ಥಾವರದಿಂದ ಬೆಂದೂರು ಹಾಗೂ ಪಣಂಬೂರು ಸ್ಥಾವರಕ್ಕೆ ನೀರು ಪೂರೈಕೆ ಮಾಡುವ 900 ಎಂ.ಎಂ ವ್ಯಾಸದ ಮುಖ್ಯ ಕೊಳವೆಯಲ್ಲಿ ಪಣಂಬೂರು ಎಂ.ಸಿ.ಎಂ.ಎಫ್. ಬಳಿ ರಾಷ್ಟ್ರೀಯ ಹೆದ್ದಾರಿ ಬಳಿ ಸೋರಿಕೆ ಉಂಟಾಗಿದ್ದು ದುರಸ್ಥಿ ಕೈಗೊಳ್ಳಲಾಗುವುದು.
ಈ ಹಿನ್ನೆಲೆಯಲ್ಲಿ ಎ.28ರಂದು ಬೆಳಗ್ಗೆ 8ರಿಂದ ಎ.29ರಂದು ಬೆಳಗ್ಗೆ 8 ಗಂಟೆಯವರೆಗೆ 24 ಗಂಟೆ ಅವಧಿಯಲ್ಲಿ ಸುರತ್ಕಲ್, ಪಣಂಬೂರು, ಕುಳಾಯಿ, ಕಾನ, ಕಾಟಿಪಳ್ಳ, ಎನ್‌ಐಟಿಕೆ, ಸಸಿಹಿತ್ಲು, ಕೂಳೂರು, ಕೊಟ್ಟಾರ ಭಾಗಶ:, ಬೆಂದೂರು ಲೋ-ಲೆವೆಲ್ ಪ್ರದೇಶಗಳಾದ ಕಾರ್‌ಸ್ಟ್ರೀಟ್, ಕುದ್ರೋಳಿ, ಫಿಷಿಂಗ್ ಹಾರ್ಬರ್, ಕೊಡಿಯಾಲ್ಬೈಲ್ ಇತ್ಯಾದಿ ಪ್ರದೇಶಗಳಿಗೆ ಸಂಪೂರ್ಣವಾಗಿ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಪ್ರಕಟನ ತಿಳಿಸಿದೆ.
Next Story





