ಮಂಗಳೂರು: ಎ.29ರಂದು ವಿದ್ಯುತ್ ನಿಲುಗಡೆ
ಮಂಗಳೂರು, ಎ.27:ನಗರದ ಕೂಳೂರು/ವಿಮಾನ ನಿಲ್ದಾಣ/ಚಿಲಿಂಬಿಯ ಫೀಡರ್‌ಗಳಲ್ಲಿ ಕಾಮಗಾರಿ ನಡೆಯಲಿರುವುದರಿಂದ ಎ.29ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4ರವರೆಗೆ ಗಾಂಧಿನಗರ, ವಿದ್ಯಾನಗರ, ಕೂಳೂರು ಜಂಕ್ಷನ್, ರಾಯಿಕಟ್ಟೆ, ಬಂಗ್ರಕೂಳೂರು, ಕೊಟ್ಟಾರ ಚೌಕಿ, ಕೊಂಚಾಡಿ, ಕುಂಟಾಲ್‌ಪಾಡಿ, ಚಿಲಿಂಬಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ನಿಲುಗಡೆಯಾಗಲಿದೆ.
ಎ.29ರಂದು ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಬೆಂಗ್ರೆ ಫೀಡರ್‌ನಲ್ಲಿ ನಿರ್ವಹಣಾ ಕಾಮಗಾರಿ ನಡೆಯಲಿರುವುದರಿಂದ ತಣ್ಣೀರ್ ಬಾ, ಕಸಬ ಬೆಂಗ್ರೆ, ತೋಟ ಬೆಂಗ್ರೆ, ಬೊಕ್ಕಪಟ್ಟಣ ಬೆಂಗ್ರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜು ನಿಲುಗಡೆಯಾಗಲಿದೆ.
ಎ.29ರಂದು ಬೆಳಗ್ಗೆ 10ರಿಂದ ಸಂಜೆ 4ರವರೆಗೆ ಎಸ್‌ಇಝೆಡ್ ಉಪಕೇಂದ್ರದಿಂದ ಹೊರಡುವ ಈಶ್ವರ್ ಕಟ್ಟೆ ಮತ್ತು ಪೆರಾರ ಫೀಡರ್‌ನಲ್ಲಿ ಕಾಮಗಾರಿ ನಡೆಯಲಿರುವುದರಿಂದ ಕೊಳಂಬೆ, ಕೌಡೂರು, ಮೂಡುಪೆರಾರ, ಮುರ, ಕಜೆಪದವು, ತಿರುವೆದಗುರಿ, ಕಿನ್ನಿಕಂಬಳ, ಎರ್ಮೆಪದವು, ಗುರುಕಂಬ್ಳ ದರ್ಗಾ, ಕಂದಾವರ, ಕೊಂಪದವು, ಮಂಜನಕಟ್ಟೆ, ಪೂವ್ಮರ್ ಪದವು, ಅಳಿಕೆಪದವು, ಗಣೇಶನಗರ ಹಾಗೂ ಸುತ್ತಮುತ್ತಲಿನ ಪ್ರದೇಶ ಗಳಲ್ಲಿ ವಿದ್ಯುತ್ ಸರಬರಾಜು ನಿಲುಗಡೆಯಾಗಲಿದೆ.





