ಜಲಮಂಡಳಿ: ಕಾಲರಾ ನಿಯಂತ್ರಣಕ್ಕೆ ಕ್ರಮ
ಬೆಂಗಳೂರು, ಎ.27: ಬೆಂಗಳೂರು ಜಲಮಂಡಳಿಯು ನೀರು ಸರಬರಾಜು ಕೊಳವೆಯಲ್ಲಿ ಸೋರುವಿಕೆಯನ್ನು ಸಾರ್ವಜನಿಕರಿಂದ ಅಥವಾ ಮಂಡಳಿಯ ಸಿಬ್ಬಂದಿಗಳು ಗುರುತಿಸಿದ ತಕ್ಷಣ ಸೋರುವಿಕೆ ತಡೆಗಟ್ಟಲು ಕ್ರಮ ವಹಿಸಲಾಗಿರುತ್ತದೆ.
ಜಲಮಂಡಳಿಯ ಕೊಳವೆಗಳಿಗೆ ಕಲುಷಿತ ನೀರು ಸರಬರಾಜಾಗುತ್ತಿದ್ದಲ್ಲಿ ತಕ್ಷಣ ಕ್ರಮವಹಿಸಲಾಗುತ್ತದೆ. ಕಾಲರಾ ಮತ್ತು ಜಿಇಗೆ ಸಂಬಂಧಿಸಿದ ಮಾಹಿತಿಯನ್ನು ಸಾಂಕ್ರಾಮಿಕ ರೋಗಗಳ ಆಸ್ಪತ್ರೆಯಿಂದ ಎ.1ರಿಂದ 26ರವರೆಗೆ ನೋಂದಣಿಯಾದ ಪ್ರಕರಣಗಳ ವಿಳಾಸವನ್ನು ಪಡೆದು ಅಂತಹ ಸ್ಥಳಗಳಿಂದ ನೀರಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿದೆ.
ಎ.26ರವರೆಗೆ ಒಟ್ಟು 63 ನೀರಿನ ಮಾದರಿಯನ್ನು ಸಂಗ್ರಹಿಸಿದ್ದು, 3 ಮಾದರಿಗೆ ಸಂಬಂಧಿಸಿದ ಪ್ರದೇಶಗಳಲ್ಲಿ ನೀರು ಸರಬರಾಜು ಇಲ್ಲದಿದ್ದ ಕಾರಣ ನೀರಿನ ಮಾದರಿಯನ್ನು ಸಂಗ್ರಹಿಸಿರುವುದಿಲ್ಲ. 41 ಮಾದರಿಗೆ ಸಂಬಂಧಿಸಿದ ನೀರಿನ ಮಾದರಿಗಳನ್ನು ಸಂಗ್ರಹಿಸಲಾಗಿದ್ದು, ಎಲ್ಲ 40 ಮಾದರಿಯ ಫಲಿತಾಂಶವು ಕುಡಿಯಲು ಯೋಗ್ಯವಾಗಿರುತ್ತದೆ. 1 ಪ್ರಕರಣದಲ್ಲಿ ಫಲಿತಾಂಶವು ನಿರೀಕ್ಷಣೆಯಲ್ಲಿರುತ್ತದೆ. ಹಾಗೂ ಉಳಿದ 19 ಮಾದರಿಗಳಿಗೆ ಸಂಬಂಧಿಸಿದ ಪ್ರದೇಶಗಳು ಜಲ ಮಂಡಳಿಯ ವ್ಯಾಪ್ತಿಗೆ ಒಳಪಟ್ಟಿರುವುದಿಲ್ಲ.
ನಗರದಲ್ಲಿ ಕೋವಿಡ್-19 ಹರಡುತ್ತಿರುವ ಹಿನ್ನೆಲೆಯಲ್ಲಿ ಅಂತರ ಕಾಯ್ದುಕೊಳ್ಳಬೇಕಾಗಿರುವುದರಿಂದ ಜಲಮಂಡಳಿಯ ಮಾಪನ ಓದುಗರು ಮನೆ ಮನೆಗೆ ತೆರಳಿ ನೀರಿನ ಬಿಲ್‍ನ್ನು ವಿತರಿಸಲು ಸಾಧ್ಯವಾಗುವುದಿಲ್ಲ. ಹೀಗಾಗಿ ನೀರಿನ ಬಿಲ್‍ನ ಮಾಹಿತಿಯನ್ನು ಜಲಮಂಡಳಿಯಲ್ಲಿ ಲಭ್ಯವಿರುವ ಗ್ರಾಹಕರ ಮೊಬೈಲ್ ನಂಬರ್‍ಗಳಿಗೆ ಎಸ್‍ಎಮ್‍ಎಸ್ ಮುಖಾಂತರ ಕಳುಹಿಸಲಾಗುತ್ತಿದ್ದು, ಎಸ್‍ಎಂಎಸ್‍ನಲ್ಲಿರುವ ಲಿಂಕ್ ಮುಖಾಂತರ ನೀರಿನ ಬಿಲ್‍ನ್ನು ಪಾವತಿಸಬಹುದಾಗಿದೆ.
ಜಲಮಂಡಳಿಯ ಅಧಿಕೃತ ವೆಬ್‍ಸೈಟ್ www.bwssb.gov.in ನಲ್ಲಿ ಎಲ್ಲ ಗ್ರಾಹಕರ ಬಿಲ್‍ಗಳನ್ನು ಪ್ರಕಟಿಸಲಾಗುತ್ತಿದ್ದು, ಬಿಲ್ ಪಾವತಿಗೆ ಮಂಡಳಿಯ ಆನ್‍ಲೈನ್ ಪೇಮೆಂಟ್ ಸೇವೆಗಳಾದ BBPS(Bharat Bill Payment System) ನಿಂದ ಲಭ್ಯವಿರುವ Paytm, Phone-Pe, Google Pay ಮುಖಾಂತರವು ಪಾವತಿಸಬಹುದಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.







