ದ.ಕ. ಜಿಲ್ಲೆಯಲ್ಲಿ 8 ಕಂಟೈನೈಂಟ್ ಝೋನ್
ಮಂಗಳೂರು, ಎ. 27: ಕೊರೋನ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಲೇ ದ.ಕ.ಜಿಲ್ಲೆಯಲ್ಲಿ ಕಂಟೈನ್ಮೆಂಟ್ ಝೋನ್‌ಗಳ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ.
ಮಂಗಳೂರು ತಾಲೂಕಿನ ಪಡೀಲ್ ಫಸ್ಟ್ ನ್ಯೂರೋ ಆಸ್ಪತ್ರೆಯ ಸುತ್ತಮುತ್ತ, ತೊಕ್ಕೊಟ್ಟು ಜಂಕ್ಷನ್, ಪದವು ಗ್ರಾಮದ ಕಕ್ಕೆಬೆಟ್ಟು ಮತ್ತು ಬಂಟ್ವಾಳ ತಾಲೂಕಿನ ತುಂಬೆ ಗ್ರಾಮ, ಬಿ ಕಸಬಾ ಗ್ರಾಮ, ನರಿಕೊಂಬು ಗ್ರಾಮ, ಪುತ್ತೂರು ತಾಲೂಕಿನ ಸಂಪ್ಯ ಮತ್ತು ಉಪ್ಪಿನಂಗಡಿ ಗ್ರಾಮವನ್ನು ಕಂಟೈನ್ಮೆಂಟ್ ಝೋನ್‌ಗಳಾಗಿ ಜಿಲ್ಲಾಧಿಕಾರಿ ಅಧಿಸೂಚನೆ ಹೊರಡಿಸಿದ್ದಾರೆ. ಪ್ರತಿಯೊಂದು ಝೋನ್‌ಗೂ ಕಮಾಂಡರ್‌ಗಳನ್ನು ನೇಮಿಸಲಾಗಿದೆ.
Next Story





