ಐದು ಈಶಾನ್ಯ ರಾಜ್ಯಗಳು ಸಂಪೂರ್ಣ ಕೊರೋನ ಮುಕ್ತ: ಕೇಂದ್ರ ಸಚಿವ

ಹೊಸದಿಲ್ಲಿ, ಎ.27: ಎಂಟು ಈಶಾನ್ಯ ರಾಜ್ಯಗಳ ಪೈಕಿ ಐದು ಸಂಪೂರ್ಣವಾಗಿ ಕೊರೋನ ಮುಕ್ತವಾಗಿದ್ದು,ಉಳಿದ ಮೂರು ರಾಜ್ಯಗಳಲ್ಲಿ ಕಳೆದ ಕೆಲವು ದಿನಗಳಲ್ಲಿ ಕೋವಿಡ್-19ರ ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲ ಎಂದು ಕೇಂದ್ರದ ಈಶಾನ್ಯ ಪ್ರದೇಶಾಭಿವೃದ್ಧಿ ಸಚಿವ ಜಿತೇಂದ್ರ ಸಿಂಗ್ ಅವರು ಸೋಮವಾರ ತಿಳಿಸಿದರು.
ಶಿಲ್ಲಾಂಗ್‌ನ ಈಶಾನ್ಯ ಮಂಡಳಿ ಮತ್ತು ವಿವಿಧ ಸರಕಾರಿ ಸಂಸ್ಥೆಗಳು ಹಾಗೂ ಪಿಎಸ್‌ಯುಗಳ ಪ್ರತಿನಿಧಿಗಳೊಂದಿಗೆ ವೀಡಿಯೊ ಕಾನ್ಫರೆನ್ಸ್ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಂಗ್,ಸಿಕ್ಕಿಂ,ನಾಗಾಲ್ಯಾಂಡ್,ಅರುಣಾಚಲ ಪ್ರದೇಶ,ಮಣಿಪುರ ಮತ್ತು ತ್ರಿಪುರಾ ಸಂಪೂರ್ಣವಾಗಿ ಕೊರೋನ ಮುಕ್ತಗೊಂಡಿವೆ.
ಅಸ್ಸಾಮಿನಲ್ಲಿ 11, ಮೇಘಾಲಯದಲ್ಲಿ 8 ಮತ್ತು ಮಿರೆರಾಮ್‌ನಲ್ಲಿ ಒಂದು ಪ್ರಕರಣಗಳಿದ್ದು,ಎಲ್ಲ ರೋಗಿಗಳು ಚೇತರಿಸಿಕೊಂಡಿದ್ದಾರೆ. ಈ ರಾಜ್ಯಗಳಲ್ಲಿ ರವಿವಾರ ರಾತ್ರಿಯವರೆಗೆ ಯಾವುದೇ ಹೊಸ ಪ್ರಕರಣ ದಾಖಲಾಗಿಲ್ಲ ಎಂದರು.
Next Story





