ಚೀನಾ: 3 ಸಾಮಾಜಿಕ ಹೋರಾಟಗಾರರು ನಾಪತ್ತೆ

ಬೀಜಿಂಗ್, ಎ. 27: ಚೀನಾದ ಮೂವರು ಇಂಟರ್‌ನೆಟ್ ಕಾರ್ಯಕರ್ತರು ನಾಪತ್ತೆಯಾಗಿದ್ದಾರೆ ಹಾಗೂ ಸೆನ್ಸಾರ್ ಆಗಿರುವ ಕೊರೋನವೈರಸ್ ಸುದ್ದಿಗಳನ್ನು ಆನ್‌ಲೈನ್‌ನಲ್ಲಿ ಸಂಗ್ರಹಿಸಿಟ್ಟಿರುವುದಕ್ಕಾಗಿ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂಬುದಾಗಿ ನಂಬಲಾಗಿದೆ ಎಂದು ಅವರ ಸಂಬಂಧಿಯೊಬ್ಬರು ಹೇಳಿದ್ದಾರೆ.
ನೂತನ-ಕೊರೋನ ವೈರಸ್‌ಗೆ ಸಂಬಂಧಿಸಿ ಎಚ್ಚರಿಕೆ ನೀಡಲು ಪ್ರಯತ್ನಿಸಿದ ಹಲವರನ್ನು ಚೀನಾವು ಶಿಕ್ಷಿಸಿದೆ.
ಸಾಫ್ಟ್‌ವೇರ್ ಅಭಿವೃದ್ಧಿ ವೇದಿಕೆ ‘ಗಿಟ್‌ಹಬ್’ಗೆ ಸಂಬಂಧಿಸಿ ಯೋಜನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಚೆನ್ ಮೇ, ಕೈ ವೇ ಮತ್ತು ಕೈ ವೇಯ ಗೆಳತಿ ಟಾಂಗ್ ಎಂಬವರು ಎಪ್ರಿಲ್ 19ರಂದು ನಾಪತ್ತೆಯಾಗಿದ್ದಾರೆ ಎಂದು ಚೆನ್ ಸಹೋದರ ಚೆನ್ ಕುನ್ ಆರೋಪಿಸಿದ್ದಾರೆ.
‘ಟರ್ಮಿನಸ್2019’ ಎಂಬ ಹೆಸರಿನ ಯೋಜನೆಯಲ್ಲಿ ಸುದ್ದಿ ಸಂಸ್ಥೆಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಸೆನ್ಸಾರ್ ಆಗಿರುವ ಲೇಖನಗಳನ್ನು ಸಂಗ್ರಹಿಸಿಡಲಾಗಿತ್ತು.
Next Story





