ಸಜಿಪ ಮುನ್ನೂರು ನೇಮೋತ್ಸವ ರದ್ದು
ಬಂಟ್ವಾಳ, ಎ. 28: ಮೇ 1 ಮತ್ತು 2ರಂದು ನಡೆಯಬೇಕಿದ್ದ ತಾಲೂಕಿನ ಸಜಿಪ ಮುನ್ನೂರು ಗ್ರಾಮದ ಮುದೆಲ್ ಮುಟ್ಟಿ ಶ್ರೀ ನಾಲ್ಕೈತ್ತಾಯ ಮತ್ತು ಪರಿವಾರ ದೈವಗಳ ದೈವಸ್ಥಾನದ ವಾರ್ಷಿಕ ಸಾನದ ಮೆಚ್ಚಿ ನೇಮೋತ್ಸವವು ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿರುವುದರಿಂದ ರದ್ದು ಮಾಡಲಾಗಿದೆ.
ಈ ಬಗ್ಗೆ ಮಾಗಣೆ ತಂತ್ರಿಗಳು, ಪರಾರಿಗುತ್ತು ಕೋಟಿಮಾರ್ತರು ಹಾಗೂ ಗುತ್ತುಮಾಗಣೆಯವರು ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
Next Story





