ಉಡುಪಿ: 680 ದಲಿತ ಕುಟುಂಬಗಳಿಗೆ ಆಹಾರದ ಕಿಟ್ ವಿತರಣೆ

ಉಡುಪಿ, ಎ.28: ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಉಡುಪಿ ಮತ್ತು ಕಾಪು ತಾಲೂಕು ಶಾಖೆ ವತಿಯಿಂದ ಕೊರೋನಾ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿರುವ ಸುಮಾರು 680 ದಲಿತ ಕುಟುಂಬ ಗಳಿಗೆ ಆಹಾರದ ಕಿಟ್‌ಗಳನ್ನು ವಿತರಿಸುವ ಕಾರ್ಯಕ್ರಮಕ್ಕೆ ಎ.27ರಂದು ಆದಿಉಡುಪಿ ಅಂಬೇಡ್ಕರ್ ಭವನದಲ್ಲಿ ಚಾಲನೆ ನೀಡಲಾಯಿತು.
ಈ ಎರಡೂ ತಾಲೂಕಿನ ದಸಂಸ ಅಂಬೇಡ್ಕರ್‌ವಾದ ಗ್ರಾಮ ಶಾಖೆಗಳ ಮೂಲಕ ಅಕ್ಕಿ ಮತ್ತು ಕೆಲವೊಂದು ಪಡಿತರಗಳನ್ನು ವಿತರಿಸಲಾ ಯಿತು. ಆಯಾ ಗ್ರಾಮ ಶಾಖೆಯು ತಮ್ಮ ವ್ಯಾಪ್ತಿಯ ಬಡ ದಲಿತ ಕುಟುಂಬಗಳಿಗೆ ಕಿಟ್ಗಳನ್ನು ತಲುಪಿಸುವ ಜವಾಬ್ದಾರಿಯನ್ನು ವಹಿಸಿಕೊಂಡಿದ್ದು, ಅದರಂತೆ ಸುಮಾರು 25 ಗ್ರಾಮ ಶಾಖೆಯ ಸಂಚಾಲಕರು ಬಂದು ಕಿಟ್ಗಳನ್ನು ಪಡೆದುಕೊಂಡರು.
ದೈಹಿಕ ಅಂತರವನ್ನು ಕಾಯ್ದುಕೊಂಡು ಸರಳವಾಗಿ ನಡೆದ ಈ ಕಾರ್ಯಕ್ರಮ ದಲ್ಲಿ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿಲ್ಲಾ ಪ್ರಧಾನ ಸಂಚಾಲಕ ಸುಂದರ ಮಾಸ್ತರ್, ಉಪ ಪ್ರಧಾನ ಸಂಚಾಲಕ ಶ್ಯಾಮರಾಜ್ ಬಿರ್ತಿ, ಭಾಸ್ಕರ್ ಮಾಸ್ಟರ್, ಪರಮೇಶ್ವರ ಉಪ್ಪೂರು, ಶ್ಯಾಮ ಸುಂದರ್ ತೆಕ್ಕಟ್ಟೆ, ಪ್ರವೀಣ್ ಗುಂಡಿಬೈಲು, ತಾಲೂಕು ಸಂಚಾಲಕ ಶಂಕರದಾಸ್ ಚೆಂಡ್ಕಳ, ಉಡುಪಿ ನಗರ ಠಾಣಾಧಿಕಾರಿ ಸತ್ಯವೇಲು, ಫಾ.ವಿಲೀಯಂ ಮಾರ್ಟಿಸ್, ಜಿಲ್ಲಾ ಮುಸ್ಲಿಂ ಒಕ್ಕೂಟದ ಮೌಲಾನ ಇಕ್ಬಾಲ್, ಸಮಾಜ ಕಲ್ಯಾಣ ಇಲಾಖೆಯ ಮ್ಯಾನೇಜರ್ ಭಾಸ್ಕರ ಮೊದಲಾದವರು ಉಪಸ್ಥಿತರಿದ್ದರು.







