ಕನಾಟರ್ಕ ವಿಜ್ಞಾನ, ತಂತ್ರಜ್ಞಾನ ಅಕಾಡೆಮಿಗೆ ಪ್ರೊ.ಅಯ್ಯಪ್ಪನ್ ಅಧ್ಯಕ್ಷ
ಉಡುಪಿ, ಎ.28: ಖ್ಯಾತ ಬಾಹ್ಯಾಕಾಶ ವಿಜ್ಞಾನಿ ದಿ.ಪ್ರೊ.ಯು.ಆರ್.ರಾವ್ ಅಧ್ಯಕ್ಷತೆಯಲ್ಲಿ ಪ್ರಾರಂಭಗೊಂಡ ಕರ್ನಾಟಕ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಂಗಸಂಸ್ಥೆಯಾದ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ನೂತನ ಅಧ್ಯಕ್ಷರಾಗಿ ಖ್ಯಾತ ವಿಜ್ಞಾನಿ, ಭಾರತೀಯ ಕೃಷಿ ಸಂಶೋಧನಾ ಪರಿಷತ್‌ನ ನಿವೃತ್ತ ಮಹಾನಿರ್ದೇಶಕ ಪ್ರೊ.ಎಸ್.ಅಯ್ಯಪ್ಪನ್ ನೇಮಕಗೊಂಡಿದ್ದಾರೆ.
ಮೂರು ವರ್ಷಗಳ ಅವಧಿಗೆ ನೇಮಕಗೊಂಡ ಸಮಿತಿಗೆ 13 ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಖ್ಯಾತ ಶಿಕ್ಷಣ ತಜ್ಞರು, ಹೆಸರಾಂತ ವಿಜ್ಞಾನಿಗಳು ಹಾಗೂ ಹಿರಿಯ ಸರಕಾರಿ ಆಡಳಿತಾಧಿಕಾರಿಗಳು ಇದರಲ್ಲಿ ಸೇರಿದ್ದಾರೆ.
Next Story





