ಮೂಡುಬಿದಿರೆ: ಬೈಕ್ ಸವಾರನನ್ನು ತಡೆದ ಯುವಕನಿಗೆ ಚೂರಿ ಇರಿತ
ಮೂಡುಬಿದಿರೆ: ಬಂಟ್ವಾಳ-ಮೂಡುಬಿದಿರೆ ಗಡಿಭಾಗವಾಗಿರುವ ಪುಚ್ಚೆಮೊಗರು ಚೆಕ್‍ಪೋಸ್ಟ್ ನಲ್ಲಿ ಬ್ಯಾರಿಕೇಡ್‍ಗೆ ಗುದ್ದಿ ಪರಾರಿಯಾಗುತ್ತಿದ್ದ ಬೈಕ್ ಸವಾರನನ್ನು ತಡೆದ ವ್ಯಕ್ತಿಗೆ ಚೂರಿ ಯಿಂದ ಇರಿದ ಘಟನೆ ಮಂಗಳವಾರ ನಡೆದಿದೆ.
ಚೂರಿ ಇರಿತಕ್ಕೊಳಗಾದ ಕರಿಂಜೆಯ ಪಚ್ಚು ಯಾನೆ ಶಿವಕುಮಾರ್(30)ನನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಂಟ್ವಾಳ ಕಡೆಯಿಂದ ಬೈಕ್‍ನಲ್ಲಿ ಬಂದ ವ್ಯಕ್ತಿಯೋರ್ವ ಪುಚ್ಚೆಮೊಗರು ಚೆಕ್ ಪೋಸ್ಟ್ ನಲ್ಲಿ ಬ್ಯಾರಿಕೇಡ್ ಗೆ ಢಿಕ್ಕಿಯಾದರೂ ನಿಲ್ಲದೇ ಮುಂದೆ ಹೋಗಿದ್ದು, ಇದನ್ನು ಗಮನಿಸಿದ ಸ್ಥಳೀಯ ಯುವಕರು ಮೂರು ಬೈಕ್‍ಗಳಲ್ಲಿ ಆತನನ್ನು ಬೆನ್ನಟ್ಟಿದ್ದಾರೆ. ತಾಕೋಡೆ ಕ್ರಾಸ್‍ನಲ್ಲಿ ಬೈಕ್ ತಡೆದು ವಿಚಾರಿಸಿದ ಶಿವಕುಮಾರ್ ಗೆ ಆರೋಪಿ ಚೂರಿಯಿಂದ ಇರಿದು ಪರಾರಿಯಾದ ಎನ್ನಲಾಗಿದೆ. ಆರೋಪಿಯ ಪತ್ತೆಗೆ ಪೊಲೀಸರು ಕಾರ್ಯ ಪ್ರವೃರ್ತರಾಗಿದ್ದಾರೆ.
Next Story





