ಚೀನಾ ರಫ್ತಿನ ಮೇಲೆ ನಿರ್ಬಂಧ ಹೇರಿದ ಅಮೆರಿಕ

ವಾಶಿಂಗ್ಟನ್, ಎ. 28: ಅಮೆರಿಕ ಸೋಮವಾರ ಚೀನಾ ರಫ್ತು ನೀತಿಯಲ್ಲಿ ಬದಲಾವಣೆ ತಂದಿದ್ದು, ಚೀನಾಕ್ಕೆ ಮಾಡಲಾಗುವ ರಫ್ತುಗಳ ಮೇಲೆ ಹೊಸ ನಿರ್ಬಂಧಗಳನ್ನು ಹೇರಲಾಗಿದೆ.
ಈ ಮೂಲಕ, ಚೀನಾಕ್ಕೆ ಮಾಡಲಾಗುವ ವಿಮಾನ ಬಿಡಿಭಾಗಗಳು ಮತ್ತು ಸೆಮಿಕಂಡಕ್ಟರ್‌ಗಳಿಗೆ ಸಂಬಂಧಿಸಿದ ಹಲವು ಸಲಕರಣೆಗಳ ರಫ್ತನ್ನು ತಡೆಹಿಡಿಯಲಾಗಿದೆ. ಹಲವು ನಿರ್ದಿಷ್ಟ ವಸ್ತುಗಳನ್ನು ಸೇನಾ ಸಂಸ್ಥೆಗಳಿಗೆ ಮಾರಾಟ ಮಾಡಲು ಅಮೆರಿಕದ ಕಂಪೆನಿಗಳು ಪರವಾನಿಗೆ ಪಡೆಯಬೇಕೆಂದು ನೂತನ ನಿಯಮಗಳು ಹೇಳುತ್ತವೆ. ಚೀನಾದ ಸೇನೆ ಪೀಪಲ್ಸ್ ಲಿಬರೇಶನ್ ಆರ್ಮಿ ಮುಂತಾದ ಸಂಸ್ಥೆಗಳಿಗೆ ಅಮೆರಿಕದ ಕಂಪೆನಿಗಳು ಮಾಡುವ ರಫ್ತುಗಳ ಮೇಲೆ ನಿರ್ಬಂಧಗಳು ಎದುರಾಗಿವೆ.
Next Story





