ಹಾಲಿ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ 0.2 ಶೇಕಡಕ್ಕೆ ಕಡಿತಗೊಳಿಸಿದ ‘ಮೂಡೀಸ್’

ಹೊಸದಿಲ್ಲಿ, ಎ.26: ಜಾಗತಿಕ ವಿತ್ತೀಯ ರೇಟಿಂಗ್ಸ್ ಸಂಸ್ಥೆ ‘ಮೂಡೀಸ್’ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಒಟ್ಟು ಆಂತರಿಕ ಉತ್ಪನ್ನ (ಜಿಡಿಪಿ)ದ ಅಂದಾಜು ಬೆಳವಣಿಗೆಯನ್ನು ಶೇ.0.2ಕ್ಕೆ ಕಡಿತಗೊಳಿಸಿದೆ.
ಮೂಡೀಸ್ ಮಾರ್ಚ್‌ನಲ್ಲಿ ಪ್ರಕಟಿಸಿದ್ದ ಭಾರತದ ಭವಿಷ್ಯದ ಜಿಡಿಪಿ ಬೆಳವಣಿಗೆಯ ದರಕ್ಕಿಂತ ಇದು ಇನ್ನಷ್ಟು ಕಡಿಮೆಯಾಗಿದೆ. ಮಾರ್ಚ್‌ನಲ್ಲಿ ಮೂಡೀಸ್ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಅರ್ಥಿಕತೆಯ ಬೆಳವಣಿಗೆ ಯು ಶೇ.2.5 ಎಂಬುದಾಗಿ ಅಂದಾಜಿಸಿತ್ತು. ಸೋಮವಾರ ಇಂಡಿಯಾ ರೇಟಿಂಗ್ಸ್ ಆ್ಯಂಡ್ ರಿಸರ್ಚ್ ಸಂಸ್ಥೆ ಕೂಡಾ ಹಾಲಿ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರವನ್ನು 1.9 ಶೇಕಡ ಆಗಲಿದೆ ಎಂದು ಅಂದಾಜಿಸಿದ್ದು, ಇದು ಕಳೆದ 29 ವರ್ಷಗಳಲ್ಲೇ ಅತ್ಯಂತ ಕೆಳಮಟ್ಟದ್ದಾಗಿದೆ.
ಆದಾಗ್ಯೂ ಒಂದು ವೇಳೆ ಲಾಕ್‌ಡೌನ್ ಅನ್ನು ಮೇ ತಿಂಗಳ ಮಧ್ಯದ ನಂತರವೂ ವಿಸ್ತರಿಸಿದ್ದಲ್ಲಿ, ಆರ್ಥಿಕತೆಯು ಇನ್ನಷ್ಟು ಸಂಕುಚಿತಗೊಳ್ಳಲಿದೆ ಎಂದು ಅದು ಭವಿಷ್ಯ ನುಡಿದಿತ್ತು.
Next Story





