ದ.ಕ. ಜಿಲ್ಲೆಯಿಂದ ತಮ್ಮ ಊರಿಗೆ ಮರಳಿದ ವಲಸೆ ಕಾರ್ಮಿಕರು

ಮಂಗಳೂರು, ಎ.28: ಲಾಕ್‌ಡೌನ್ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ವಿವಿಧೆಡೆ ಬಾಕಿಯಾದ ವಲಸೆ ಕಾರ್ಮಿಕರನ್ನು ಮಂಗಳವಾರ ನಗರದ ಪುರಭವನದಿಂದ ಬಸ್ ಗಳಲ್ಲಿ ಕಳುಹಿಸಿಕೊಡಲಾಯಿತು.
ದ.ಕ ಜಿಲ್ಲಾಡಳಿತವು ಕಾರ್ಮಿಕರನ್ನು ಕಳುಹಿಸಲು ಖಾಸಗಿ ಮತ್ತು ಸರ್ಕಾರಿ ಬಸ್ಸುಗಳ ವ್ಯವಸ್ಥೆ ಮಾಡಿತ್ತು. ಅದರಂತೆ ಮಂಗಳೂರಿನಿಂದ ಹಾವೇರಿ, ಬಾಗಲಕೋಟೆ, ದಾವಣಗೆರೆ, ಬಿಜಾಪುರ, ಶಿವಮೊಗ್ಗ ಭಾಗದ ವಲಸೆ ಕಾರ್ಮಿಕರನ್ನು ಸುಮಾರು 50ಕ್ಕಿಂತಲೂ ಅಧಿಕ ಬಸ್ಸುಗಳಲ್ಲಿ ಕಳುಹಿಸಿಕೊಡಲಾಯಿತು.
ಸುಮಾರು ಎರಡು ಸಾವಿರಕ್ಕೂ ಅಧಿಕ ಕಾರ್ಮಿಕರು ದ.ಕ.ಜಿಲ್ಲೆಯ ವಿವಿಧೆಡೆ ಬಾಕಿಯಾಗಿದ್ದರು. ಅವರನ್ನು ದ.ಕ ಜಿಲ್ಲಾಡಳಿತವು ಬಸ್ ಗಳಲ್ಲಿ ಕಳುಹಿಸಿಕೊಟ್ಟಿತು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್, ಕಾರ್ಮಿಕರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ ಮತ್ತು ಆರೋಗ್ಯ ತಪಾಸಣೆಗಳನ್ನು ನಡೆಸಲಾಗಿದೆ. ತಪಾಸಣೆ ಬಳಿಕ ಸುರಕ್ಷಿತವಾಗಿ ತಮ್ಮ ತಮ್ಮ ಊರಿಗೆ ಕಳುಹಿಸಲಾಗಿದೆ ಎಂದು ತಿಳಿಸಿದ್ದಾರೆ.
Next Story





