ಖ್ಯಾತ ಹಿಂದಿ ಚಿತ್ರನಟ ಇರ್ಫಾನ್ ಖಾನ್ ನಿಧನ

ಇರ್ಫಾನ್ ಖಾನ್ (Photo: Facebook)
ಹೊಸದಿಲ್ಲಿ,ಎ. 9: ಬಾಲಿವುಡ್ಖ್ಯಾತ ನಟ ಇರ್ಫಾನ್ ಖಾನ್, ಬುಧವಾರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 54ವರ್ಷ ವಯಸ್ಸಾಗಿತ್ತು. ಕಳೆದ ಎರಡು ವರ್ಷಗಳಿಂದ ದೊಡ್ಡಕರುಳಿನ ಸೋಂಕಿನಿಂದ ಬಳಲುತ್ತಿದ್ದ ಅವರು ಮಂಗಳವಾರ ತೀವ್ರ ಅಸ್ವಸ್ಥಗೊಂಡಿದ್ದರು. ಅವರನ್ನು ಮುಂಬೈನ ಕೋಕಿಲಾಬೆನ್ ಧೀರೂಭಾ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಇಮ್ರಾನ್ ಅವರ ಮೃತದೇಹದ ಅಂತ್ಯಸಂಸ್ಕಾರ ಮುಂಬೈನ ವರ್ಸೊವಾದಲ್ಲಿರುವ ಕಬರಸ್ತಾನದಲ್ಲಿ ಮುಸ್ಲಿಂ ಧಾರ್ಮಿಕ ವಿಧಾನಗಳೊಂದಿಗೆ ನಡೆಯಿತು.
ಲಾಕ್ಡೌನ್ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರು,ಸಮೀಪದ ಬಂಧುಗಳು ಹಾಗೂ ಮಿತ್ರರು ಸೇರಿದಂತೆ ಕೆಲವೇ ಕೆಲವು ಜನರ ಉಪಸ್ಥಿತಿಯಲ್ಲಿ ನಟನ ಮೃತದೇಹದ ಅಂತ್ಯಸಂಸ್ಕಾರ ನೆರವೇರಿತು. ಇರ್ಫಾನ್ ಅವರು ಪತ್ನಿ ಸುತಪಾ ಸಿಕ್ದರ್, ಇಬ್ಬರು ಪುತ್ರರನ್ನು ಅವರು ಅಗಲಿದ್ದಾರೆ.
ಕಳೆದ ಶನಿವಾರ ಇರ್ಫಾನ್ ಖಾನ್ ಅವರ ತಾಯಿ ಸಯೀದಾ ಬೇಗಂ ಜೈಪುರದಲ್ಲಿ ನಿಧನರಾಗಿದ್ದುರ. ಆದರೆ ಲಾಕ್ಡೌನ್ ಹಿನ್ನೆಲೆಯಲ್ಲಿ ಇಫಾನ್ ಅವರಿಗೆ ಜೈಪುರಕ್ಕೆ ತೆಳಿ ತಾಯಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಗಿರಲಿಲ್ಲ.
ಇತ್ತೀಚೆಗೆ ತೆರೆಕಂಡ ಅಂಗ್ರೇಜಿ ಮೀಡಿಯಂ, ಇರ್ಫಾನ್ ಖಾನ್ ಅಭಿನಯದ ಕೊನೆಯ ಚಿತ್ರ. ಪೀಕೂ,ಸ್ಲಂಡಾಗ್ ಮಿಲಿಯನೇರ್, ಹಿಂದಿ ಮೀಡಿಯಂ,ಲೈಫ್ ಇನ್ ಎ ಮೆಟ್ರೋ, ಪಾನ್ಸಿಂಗ್ ಥೋಮಾರ್,ಸಂಡೇ ಸೇರಿದಂತೆ 30ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ.ಭಾರತದ ಅತ್ಯಂತ ಶ್ರೇಷ್ಠ ನಟರಲ್ಲೊಬ್ಬನೆಂದು ಪರಿಗಣಿಸಲ್ಪಟ್ಟಿದ್ದ ಇರ್ಫಾನ್ ಖಾನ್ ಕಮರ್ಶಿಯಲ್ ಚಿತ್ರಗಳು ಮಾತ್ರವಲ್ಲದೆ ಹೊಸ ಅಲೆಯ ಚಿತ್ರಗಳ ಮೂಲಕವೂ ಭಾರತೀಯ ಪ್ರೇಕ್ಷಕರ ಮನಸೂರೆಗೊಂಡಿದ್ದಾರೆ. 2011ರಲ್ಲಿ ಅವರಿಗೆ ಪದ್ಮಶ್ರೀ ಪುರಸ್ಕಾರ ಲಭಿಸಿತ್ತು.
ರಾಜಸ್ಥಾನದ ಜೈಪುರದಲ್ಲಿ ಜನಿಸಿದ್ದ ಇರ್ಫಾನ್ ಖಾನ್ ಎಂಎ ಪದವಿ ಪಡೆದ ಬಳಿಕ ಆನಂತರ ಅವರು ದಿಲ್ಲಿಗೆ ತೆರಳಿ, ಇಂಡಿಯನ್ ಸ್ಕೂಲ್ ಆಫ್ ಡ್ರಾಮಾಗೆ ಸೇರ್ಪಡೆಗೊಂಡು, ಅಭಿನಯ ಪದವಿ ಪಡೆದರು. ಆನಂತರ ಮಂಬೈಗೆ ಬಂದ ಅವರು ಹಲವಾರು ಟಿವಿ ಧಾರಾವಾಹಿಗಳಲ್ಲಿ ಅಭಿನಯಿಸಿದ ಬಳಿಕ ಅವರು ಬಾಲಿವುಡ್ ಚಿತ್ರರಂಗ ಪ್ರವೇಶಿಸಿದರು. 1988ರಲ್ಲಿ ಮೀರಾ ನಾಯರ್ ನಿರ್ದೇಶನದ ಸಲಾಂ ಬಾಂಬೆ, ಇರ್ಫಾನ್ ಅಭಿನಯದ ಮೊದಲ ಚಿತ್ರವಾಗಿತ್ತು. 2013ರಲ್ಲಿ ಪಾನ್ಸಿಂಗ್ ತೋಮಾರ್ ಚಿತ್ರದ ನಟನೆಗಾಗಿ ಅವರಿಗೆ ರಾಷ್ಟ್ರೀಯ ಪುರಸ್ಕಾರ ಲಭಿಸಿತ್ತು.
ದಿ ಲಂಟ್ಬಾಕ್ಸ್, ತಲ್ವಾರ್, ಹಿಂದಿ ಮೀಡಿಯಂ, ಫೆವರೇಟ್, ಒಡೇ, ಮುಂಬೈ ಮೇರಿ ಜಾನ್, ಕ್ಯಾರವಾನ್, ಮಡಾರಿ,ಲೈಫ್ ಇನ್ ಎ ಮೆಟ್ರೋ, ಪೀಕೂ, ಬ್ಲಾಕ್ ಮೇಲ್, ಹೈದರ್, ಯೇ ಸಾಲಿ ಜಿಂದಗಿ, ಕರೀಬ್ ಕರೀಬ್ ಸಿಂಗರ್, ದ ವಾರಿಯರ್ ಚಿತ್ರಗಳಲ್ಲಿನ ಅಭಿನಯದ ಮೂಲಕ ಇರ್ಫಾನ್ ಪ್ರೇಕ್ಷಕರ ಗಮನಸೆಳೆದಿದ್ದರು.
ಹಾಲಿವುಡ್ ಚಿತ್ರರಂಗದಲ್ಲಿಯೂ ತನ್ನದೇ ಆದ ಛಾಪು ಮೂಡಿಸಿದ್ದ ಇರ್ಫಾನ್ ಖಾನ್ ಸ್ಲಂಡಾಗ್ ಮಿಲಿಯನೇರ್,ಜುರಾಸಿಕ್ವರ್ಲ್ಡ್, ಎಮೇಜಿಂಗ್ ಸ್ಪೈಡರ್ ಮ್ಯಾನ್, ಲೈಫ್ ಆಫ್ ಪೈ, ಇನ್ಫೆರ್ನೊ ಚಿತ್ರಗಳಲ್ಲಿ ಅವರ ಅಭಿನಯ ಭಾರೀ ಜನಮೆಚ್ಚುಗೆ ಪಡೆದಿತ್ತು.
2018ರಲ್ಲಿ ಇರ್ಫಾನ್ಗೆ ನ್ಯೂ ಎಂಡೊಕ್ರೈನ್ ಟ್ಯೂಮರ್ ಎಂಬ ಅಪರೂಪದ ಕ್ಯಾನ್ಸರ್ನಿಂದ ಬಾಧಿತರಾಗಿರುವುದು ದೃಢಪಟ್ಟಿತ್ತು . ಇದಕ್ಕಾಗಿ ಅವರು ಬ್ರಿಟನ್ನಲ್ಲಿ ಚಿಕಿತ್ಸೆ ಪಡೆದು ಭಾರತಕ್ಕೆ ವಾಪಸಾಗಿದ್ದರು. ಆನಂತರ ಅವರು ಆಂಗ್ರೇಜಿ ಮೀಡಿಯಂ ಚಿತ್ರದಲ್ಲಿ ಅಭಿನಯಿಸಿದ್ದರು.
ಭಾರತೀಯ ಚಿತ್ರರಂಗದ ಮೇರುನಟ ಇರ್ಫಾನ್ ಖಾನ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇರ್ಫಾನ್ ಖಾನಖಾನ್ ಭಾರತೀಯ ಚಿತ್ರರಂಗದ ಅತ್ಯುತ್ಕೃಷ್ಟ ಕಲಾವಿದರಲ್ಲೊಬ್ಬರಾಗಿದ್ದರೆಂದು ಅವರು ಬಣ್ಣಿಸಿದ್ದಾರೆ.
‘‘ಇರ್ಫಾನ್ ಖಾನ್ ಅವರ ನಿಧನವು ಚಿತ್ರಜಗತ್ತು ಹಾಗೂ ರಂಗಭೂಮಿಗೆ ತುಂಬಲಾರದ ನಷ್ಟವಾಗಿದೆ ವಿವಿಧ ಮಾಧ್ಯಮಗಳಲ್ಲಿ ಅವರ ವೈವಿಧ್ಯಮಯ ಅಭಿನಯಕ್ಕಾಗಿ ಅವರು ಸದಾ ಸ್ಮರಿಸಲ್ಪಡಲಿದ್ದಾರೆ. ಅವರ ಕುಟುಂಬಿಕರು, ಸ್ನೇಹಿತರು ಹಾಗೂ ಅಭಿಮಾನಿಗಳ ಶೋಕದಲ್ಲಿ ನಾನೂ ಸಹಭಾಗಿಯಾಗಿದ್ದಾನೆ. ಇರ್ಫಾನ್ ಖಾನ್ ಅವರ ಆತ್ಮಕ್ಕೆ ಶಾಂತಿ ಸಿಗಲಿ’’ ಎಂದು ಪ್ರಧಾನಿ ಟ್ವೀಟಿಸಿದ್ದಾರೆ.
ಕೇಂದ್ರ ಸಚಿವರಾದ ಅಮಿತ್ಶಾ, ಪ್ರಕಾಶ್ ಜಾವ್ಡೇಕರ್, ಸ್ಮತಿ ಇರಾನಿ, ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಕಾಂಗ್ರೆಸ್ ನಾಯಕ ಶಶಿ ಥರೂರ್, ರಾಜಸ್ಥಾ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸೇರಿದಂತೆ ಹಲವಾರು ರಾಜಕೀಯ ಗಣ್ಯರು, ಇರ್ಫಾನ್ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.







