ಮಂಗಳೂರು: ಮೊಬೈಲ್ ಫೀವರ್ ಕ್ಲಿನಿಕ್‌ಗೆ ಚಾಲನೆ

ಮಂಗಳೂರು, ಎ.29: ಜಿಲ್ಲಾಡಳಿತದ ನಿರ್ದೇಶದನದಂತೆ ಕೆಎಸ್‌ಆರ್‌ಟಿಸಿ ವತಿಯಿಂದ ಸಿದ್ಧಗೊಳಿಸಲಾದ ಫೀವರ್ ಕ್ಲಿನಿಕ್ ವಿಶೇಷ ಬಸ್‌ಗೆ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಚಾಲನೆ ನೀಡಿದರು.
ಕೊರೋನ ಸೋಂಕಿತರನ್ನು ಗುರುತಿಸುವುದು ಹಾಗೂ ಅಗತ್ಯ ಚಿಕಿತ್ಸೆಗೆ ನೆರವಾಗುವಲ್ಲಿ ಈ ಮೊಬೈಲ್ ಫೀವರ್ ಕ್ಲಿನಿಕ್ ಕಾರ್ಯ ಪ್ರವೃತ್ತವಾಗಲಿದೆ. ವೈದ್ಯಕೀಯ ತಪಾಸಣೆ, ಮಾಹಿತಿ ವಿನಿಮಯಕ್ಕೆ ಅನುಕೂಲವಾಗುವಂತೆ ಈ ಬಸ್ಸನ್ನು ವ್ಯವಸ್ಥೆಗೊಳಿಸಲಾ ಗಿದೆ. ಬಸ್‌ನಲ್ಲಿ ವೈದ್ಯರು, ಸಾರ್ವಜನಿಕರು ಹಾಗೂ ಚಾಲಕರಿಗೆ ಪ್ರತ್ಯೇಕ ಕ್ಯಾಬಿನ್ ವ್ಯವಸ್ಥೆ ಇದೆ. ಪ್ರತ್ಯೇಕ ಸ್ಯಾನಿಟೈಸರ್, ವಾಷ್‌ಬೇಸಿನ್ ವ್ಯವಸ್ಥೆಯೂ ಇದೆ. ಸುರಕ್ಷಿತ ಅಂತರ ಕಾಯ್ದುಕೊಳ್ಳುವ ರೀತಿಯಲ್ಲಿ ಆಸನ ವ್ಯವಸ್ಥೆ, ಕೊರೋನ ಮಾಹಿತಿ ನೀಡಲು ಟಿವಿ ವ್ಯವಸ್ಥೆ, ನಿರುಪಯುಕ್ತ ನೀರು ಸಂಗ್ರಹಿಸಲು ಟ್ಯಾಂಕ್, ದಾದಿಯರಿಗೆ ಪ್ರತ್ಯೇಕ ಆಸನ, ವೈದ್ಯಕೀಯ ಸಿಬ್ಬಂದಿಗೆ ವಿಶ್ರಾಂತಿ ಸ್ಥಳ, ಫ್ಯಾನ್, ಎಲ್‌ಇಡಿ ಲೈಟ್, ಲ್ಯಾಪ್‌ಟಾಪ್ ಚಾರ್ಜರ್ ವ್ಯವಸ್ಥೆಯನ್ನು ಕೂಡಾ ಈ ವಿಶೇಷ ಬಸ್ಸು ಹೊಂದಿದೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮೊಬೈಲ್ ಫೀವರ್ ಕ್ಲಿನಿಕ್‌ಗೆ ಹಸಿರು ನಿಶಾನೆ ನೀಡುವ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಮೇಯರ್ ದಿವಾಕರ ಪಾಂಡೇಶ್ವರ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್, ಕೋವಿಡ್ ವಿಶೇಷ ಅಧಿಕಾರಿ ಪೊನ್ನುರಾಜ್, ಅಪರ ಜಿಲ್ಲಾಧಿಕಾರಿ ರೂಪಾ, ಕೆಎಸ್‌ಆರ್‌ಟಿಸಿಯ ಮಂಗಳೂರು ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು.







.jpeg)
.jpeg)

