ರಾಜ್ಯದಲ್ಲಿ ಎನ್ 95 ಮಾಸ್ಕ್, ಪಿಪಿಇ ಕಿಟ್‍ಗಳ ಕೊರತೆಯಿಲ್ಲ: ಹೈಕೋರ್ಟ್ ಗೆ ಸರಕಾರದಿಂದ ಮಾಹಿತಿ

ಬೆಂಗಳೂರು, ಎ.29: ರಾಜ್ಯದಲ್ಲಿ ಎನ್ 95 ಮಾಸ್ಕ್, ಪಿಪಿಇ ಕಿಟ್‍ಗಳ ಕೊರತೆಯಿಲ್ಲ. ಬೇಡಿಕೆ ಆಧರಿಸಿ ಜಿಲ್ಲೆಗಳಿಗೆ ಪೂರೈಸಲಾಗಿದೆ ಎಂದು ಸರಕಾರ ಹೈಕೋರ್ಟ್ ಗೆ ಮಾಹಿತಿ ನೀಡಿದೆ.
ಈ ಕುರಿತು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಖಾಸಗಿ ಆಸ್ಪತ್ರೆಗಳನ್ನು ಕೊರೋನ ಚಿಕಿತ್ಸೆಗೆ ಇನ್ನೂ ಬಳಸಿಕೊಂಡಿಲ್ಲ. ಸದ್ಯಕ್ಕೆ ಸರಕಾರಿ ಆಸ್ಪತ್ರೆಗಳೇ ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಅಲ್ಲದೆ, ಕೆಲ ಪ್ರಮುಖ ಖಾಸಗಿ ಆಸ್ಪತ್ರೆಗಳು ಕೊರೋನ ಚಿಕಿತ್ಸೆಗಾಗಿಯೇ ತಮ್ಮ ಆಸ್ಪತ್ರೆಗಳನ್ನು ಸಜ್ಜುಗೊಳಿಸಿಟ್ಟುಕೊಂಡಿವೆ ಎಂದು ಸರಕಾರದ ಪರ ವಕೀಲರು ಪೀಠಕ್ಕೆ ತಿಳಿಸಿದರು.
ಹಲವಾರು ಖಾಸಗಿ ಆಸ್ಪತ್ರೆಗಳೂ ಈ ಪಿಪಿಇ ಕಿಟ್ ಖರೀದಿ, ಕೊರೋನ ಸೋಂಕು ಚಿಕಿತ್ಸೆಗೆ ನೆರವಾಗಲು ಸನ್ನದ್ಧವಾಗಿದೆ ಎಂದು ವಕೀಲರು ತಿಳಿಸಿದರು.
Next Story





