ಕೊರೋನ ಸೋಂಕಿತ ಪತ್ರಕರ್ತನ ಜೊತೆ ಸಂಪರ್ಕ : ನಿಗಾದಲ್ಲಿ ಕಾಸರಗೋಡು ಜಿಲ್ಲಾಧಿಕಾರಿ

ಕಾಸರಗೋಡು : ಬುಧವಾರ ಪತ್ರಕರ್ತನಿಗೆ ಕೊರೋನ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ನಿಗಾದಲ್ಲಿದ್ದಾರೆ.
ಖಾಸಗಿ ಚಾನೆಲ್ ವರದಿಗಾರ ಎ. 19 ರಂದು ಜಿಲ್ಲಾಧಿಕಾರಿಯವರ ಸಂದರ್ಶನ ನಡೆಸಿದ್ದರು.
ಪತ್ರಕರ್ತನಿಗೆ ಕೊರೋನ ದೃಢಪಟ್ಟಿರುವುದರಿಂದ ಜಿಲ್ಲಾಧಿಕಾರಿ ಅಲ್ಲದೆ ಚಾಲಕ ಹಾಗೂ ಗನ್ ಮ್ಯಾನ್ ಕ್ವಾರಂಟೈನ್ ಗೆ ತೆರಳಿದ್ದು, ಇವರ ಗಂಟಲ ದ್ರವ ತಪಾಣೆಗೆ ಕಳುಹಿಸಲು ತೀರ್ಮಾನಿಸಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಬುಧವಾರ ಸೋಂಕು ಪತ್ತೆಯಾದ ಪತ್ರಕರ್ತನಿಗೆ ಯಾವುದೇ ಸೋಂಕು ಲಕ್ಷಣಗಳಿರಲಿಲ್ಲ. ಆದರೆ ತಪಾಸಣೆ ಸಂದರ್ಭದಲ್ಲಿ ಸೋಂಕು ದೃಢಪಟ್ಟಿದೆ.
Next Story





