2. 22 ಲಕ್ಷ ರೂ. ಮೌಲ್ಯದ ಕಳ್ಳ ಭಟ್ಟಿ ವಶ
ಮಂಗಳೂರು : ನಗರದ ಕಾವೂರು-ಬೋಂದೆಲ್ ಬಳಿ ಅಕ್ರಮ ಸಾಗಾಟ ಮಾಡುತ್ತಿದ್ದ 2.22 ಲಕ್ಷ ರೂ. ಮೌಲ್ಯದ ಕಳ್ಳಭಟ್ಟಿಯನ್ನು ಪೊಲೀಸರು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಕಾವೂರು ಕುಂಜತ್ತಬೈಲ್ ಬಸವನಗರ ನಿವಾಸಿ ಅರ್ಮುಗಂ (40) ಬಂಧಿತ ಆರೋಪಿ.
ಬೋಂದೆಲ್ ಕಡೆಯಿಂದ ಕಾವೂರು ಮರಕಡದ ಕಡೆಗೆ ಅಕ್ರಮ ಕಳ್ಳಭಟ್ಟಿ ಸಾಗಾಟ ಮಾಡಲಾಗುತ್ತಿದೆ ಎಂದು ಮಂಗಳೂರು ಉತ್ತರ ಉಪವಿಭಾಗ ನೇತೃತ್ವದ ಎಸಿಪಿ ತಂಡಕ್ಕೆ ಲಭಿಸಿದ ಖಚಿತ ಮಾಹಿತಿ ಮೇರೆಗೆ ಕಾವೂರು ಪೊಲೀಸರೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿ ಓಮ್ನಿ ಸಹಿತ ಆರೋಪಿಯನ್ನು ಬಂಧಿಸಲಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Next Story





