ಮುಂದಿನ ತಿಂಗಳು ಅಂಗಡಿ, ಮಾರುಕಟ್ಟೆ, ಶಾಲೆಗಳು ಆರಂಭ: ಫ್ರಾನ್ಸ್

ಪ್ಯಾರಿಸ್, ಎ. 29: ಮುಂದಿನ ತಿಂಗಳು ಅಂಗಡಿಗಳು, ಮಾರುಕಟ್ಟೆಗಳು ಮತ್ತು ಆಯ್ದ ಶಾಲೆಗಳು ಆರಂಭಗೊಳ್ಳಬಹುದು ಎಂದು ಫ್ರಾನ್ಸ್ ಮಂಗಳವಾರ ಹೇಳಿದೆ. ಸಾರ್ವಜನಿಕ ಸಾರಿಗೆಯ ವಾಹನಗಳಲ್ಲಿ ಪ್ರಯಾಣಿಸುವಾಗ ಮುಖಕವಚವನ್ನು ಧರಿಸುವುದು ಕಡ್ಡಾಯವಾಗಿರುತ್ತದೆ ಹಾಗೂ ಮನೆಯಿಂದಲೇ ಕೆಲಸ ಮಾಡುವ ಆದೇಶವು ಇನ್ನೂ ಹಲವು ವಾರಗಳ ಕಾಲ ಜಾರಿಯಲ್ಲಿರುತ್ತದೆ ಎಂದು ಅದು ಹೇಳಿದೆ.
ಆದರೆ, ಸಾಮಾನ್ಯ ಜೀವನಕ್ಕೆ ಹಂತ ಹಂತವಾಗಿ ಮರಳುವುದು ಕೂಡ ಅಪಾಯಕಾರಿಯಾಗಿದೆ ಎಂದು ಪ್ರಧಾನಿ ಎಡ್ವರ್ಡ್ ಫಿಲಿಪ್ ಒಪ್ಪಿಕೊಳ್ಳುತ್ತಾರೆ.
ನಿಧಾನವಾಗಿ ಬೀಗಮುದ್ರೆ ತೆರವು: ಸ್ಪೇನ್
ಬೀಗಮುದ್ರೆಯನ್ನು ಮುಂದಿನ ಎರಡು ತಿಂಗಳಲ್ಲಿ ಹಂತಹಂತವಾಗಿ ತೆರವುಗೊಳಿಸಲಾಗುವುದು ಎಂದು ಸ್ಪೇನ್ ಹೇಳಿದೆ. ಅದೇ ವೇಳೆ, ಇಟಲಿಯನ್ನರಟು ಮುಂದಿನ ವಾರದಿಂದ ಮನೆಯ ಹೊರಗಡೆ ವ್ಯಾಯಾಮ ಮಾಡಬಹುದಾಗಿದೆ ಹಾಗೂ ಸಂಬಂಧಿಕರನ್ನು ಭೇಟಿ ಮಾಡಬಹುದಾಗಿದೆ. ಆದರೆ, ಅವರು ಕಡ್ಡಾಯವಾಗಿ ಮುಖಕವಚಗಳನ್ನು ಧರಿಸಬೇಕು ಹಾಗೂ ಆಲಿಂಗನ ಮತ್ತು ಕೈಕುಕುಲುಕುವುದರಿಂದ ದೂರ ಇರಬೇಕು.
ಇಟಲಿ, ಸ್ಪೇನ್ ಮತ್ತು ಫ್ರಾನ್ಸ್‌ಗಳು ಯುರೋಪ್‌ನಲ್ಲಿ ಕೊರೋನವೈರಸ್‌ನಿಂದಾಗಿ ಅತಿ ಹೆಚ್ಚಿನ ಬಾಧೆಗೊಳಗಾದ ದೇಶಗಳಾಗಿವೆ.







