ಬ್ರಿಟನ್: ವೀಸಾ ವಿಸ್ತರಣೆಯ ಲಾಭ ಭಾರತೀಯರಿಗೆ
ಲಂಡನ್, ಎ. 29: ಉದ್ಯೋಗ ವೀಸಾಗಳ ಅಡಿಯಲ್ಲಿ, ಬ್ರಿಟನ್‌ನಲ್ಲಿ ಕೊರೋನ ವೈರಸ್ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿ ಕೆಲಸ ಮಾಡುತ್ತಿರುವ ಭಾರತೀಯ ಹಾಗೂ ಇತರ ವಿದೇಶಿ ಆರೋಗ್ಯ ಮತ್ತು ಆರೈಕೆ ಕೆಲಸಗಾರರು ಉಚಿತ ವೀಸಾ ವಿಸ್ತರಣೆಯ ಲಾಭವನ್ನು ಪಡೆಯಲಿದ್ದಾರೆ.
ಗೃಹ ಕಾರ್ಯದರ್ಶಿ ಪ್ರೀತಿ ಪಟೇಲ್ ಬುಧವಾರ ವೀಸಾ ವಿಸ್ತರಣೆಯನ್ನು ಘೋಷಿಸಿದ್ದಾರೆ. ಹಾಗಾಗಿ ನರ್ಸ್‌ಗಳು, ರೇಡಿಯೊಗ್ರಾಫರ್‌ಗಳು, ಸಾಮಾಜಿಕ ಕಾರ್ಯಕರ್ತರು ಮತ್ತು ಫಾರ್ಮಾಸಿಸ್ಟ್‌ಗಳು ಸೇರಿದಂತೆ ಅಕ್ಟೋಬರ್ ಒಂದರ ಒಳಗೆ ವೀಸಾ ಅವಧಿ ಮುಗಿಯುವ ಪ್ರಮುಖ ಆರೋಗ್ಯ ಸೇವಕರ ವೀಸಾಗಳ ಅವಧಿ ಒಂದು ವರ್ಷ ವಿಸ್ತರಣೆಯಾಗಲಿದೆ.
Next Story





