ಈ ದೇಶದ ಪ್ರಧಾನಿ, 3 ಸಚಿವರಿಗೆ ಕೊರೋನ ಸೋಂಕು

ಸಾಂದರ್ಭಿಕ ಚಿತ್ರ
ಬಿಸಾವು, ಎ. 29: ಪಶ್ಚಿಮ ಆಫ್ರಿಕದ ಕರಾವಳಿಯಲ್ಲಿರುವ ಗಿನಿ-ಬಿಸಾವು ಎಂಬ ಸಣ್ಣ ದೇಶದ ಪ್ರಧಾನಿ ನುನೊ ಗೋಮ್ಸ್ ನಬಿಯಮ್ ಮತ್ತು ಅವರ ಸಚಿವ ಸಂಪುಟದ ಮೂವರು ಸದಸ್ಯರಲ್ಲಿ ಕೊರೋನ ವೈರಸ್ ಸೋಂಕಿರುವುದು ದೃಢಪಟ್ಟಿದೆ ಎಂದು ದೇಶದ ಆರೋಗ್ಯ ಸಚಿವಾಲಯ ಬುಧವಾರ ತಿಳಿಸಿದೆ.
ಸುಮಾರು 4,92,000 ಜನಸಂಖ್ಯೆಯಿರುವ ಪುಟ್ಟ ದೇಶದ ಪ್ರಧಾನಿ ಮತ್ತು ಸಚಿವರು ಸೋಂಕಿಗೆ ಒಳಗಾಗಿರುವುದು ಮಂಗಳವಾರ ಪತ್ತೆಯಾಗಿದೆ ಹಾಗೂ ಅವರನ್ನು ರಾಜಧಾನಿ ಬಿಸಾವುನಲ್ಲಿನ ಹೊಟೇಲೊಂದರಲ್ಲಿ ಕ್ವಾರಂಟೈನ್ನಲ್ಲಿಡಲಾಗಿದೆ ಎಂದು ದೇಶದ ಆರೋಗ್ಯ ಸಚಿವ ಆಂಟೋನಿಯೊ ಡೆವುನ ಸುದ್ದಿಗಾರರಿಗೆ ತಿಳಿಸಿದರು.
Next Story





