ವಿಜಯ್ ಮಲ್ಯ, ಚೋಕ್ಸಿ ಸಾಲಮನ್ನಾ: ಕೇಂದ್ರದ ವಿರುದ್ಧ ಬೆಂಗಳೂರಿನಲ್ಲಿ ಕಾಂಗ್ರೆಸ್ ಮೌನ ಧರಣಿ

ಬೆಂಗಳೂರು, ಎ.19: ಉದ್ಯಮಿಗಳಾದ ವಿಜಯ್ ಮಲ್ಯ, ಚೋಕ್ಸಿ ಅವರ ಸಾಲಮನ್ನಾ ಹಿನ್ನೆಲೆ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಮುಖಂಡರು ಬುಧವಾರ ಕಾಂಗ್ರೆಸ್ ಭವನದ ಮುಂದೆ ಮೌನ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ಮನೋಹರ್, ರಾಹುಲ್ ಗಾಂಧಿ ಅವರು ಸಾಲದ ಬಗ್ಗೆ ಸಂಸತ್ತಿನಲ್ಲೇ ಪ್ರಸ್ತಾಪಿಸಿದ್ದರು. ಈಗ ಕೇಂದ್ರ ಸರಕಾರವು ಅವರ ಸಾಲ ಮನ್ನಾ ಮಾಡಿದೆ. ಇಂತಹ ಸಂದರ್ಭದಲ್ಲಿ 68 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದೇಕೆ ಎಂದು ಪ್ರಶ್ನಿಸಿದರು.
ಲಾಕ್‍ಡೌನ್‍ನಿಂದ ಜನಸಾಮಾನ್ಯರು ಸಂಕಷ್ಟದಲ್ಲಿದ್ದಾರೆ, ಜನಸಾಮಾನ್ಯರ ಸಂಕಷ್ಟಕ್ಕೆ ಸರಕಾರ ಸ್ಪಂದಿಸಿಲ್ಲ, ರೈತರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಆದರೆ, ಉದ್ಯಮಿಗಳ ಪರವಾಗಿ ಸರಕಾರ ವರ್ತಿಸುತ್ತಿದೆ. ಇದರಿಂದ ಕೇಂದ್ರ ಸರಕಾರ ಬಡವರ ಪರವಾಗಿ ಇಲ್ಲ ಶ್ರೀಮಂತರ ಪರವಾಗಿ ಇದೆ ಎಂಬುದು ತಿಳಿಯುತ್ತದೆ ಎಂದು ಕೇಂದ್ರ ಸರಕಾದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Next Story





