ಬೆಂಗಳೂರಿನಲ್ಲಿ ಕಂಟೈನ್ಮೆಂಟ್ ಝೋನ್ ಗಳ ಸಂಖ್ಯೆ 24ಕ್ಕೆ ಇಳಿಕೆ

ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.29: ನಗರದಲ್ಲಿ ದಿನೇ ದಿನೇ ಕೊರೋನ ಸೋಂಕಿತರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ 42ಕ್ಕೆ ಏರಿಕೆಯಾಗಿದ್ದ ಕಂಟೈನ್ಮೆಂಟ್ ಝೋನ್ ಗಳ ಸಂಖ್ಯೆ 24ಕ್ಕೆ ಇಳಿಕೆಯಾಗಿದೆ.
ಈ ಕುರಿತಂತೆ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಮಾಹಿತಿ ನೀಡಿದ್ದು, ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ ಸೋಂಕು ದಿನೇ ದಿನೇ ಕಡಿಮೆಯಾಗುತ್ತಿದೆ. ಈ ಮೂಲಕ ಕಂಟೈನ್ಮೆಂಟ್ ಝೋನ್ 42ರಿಂದ 24ಕ್ಕೆ ಇಳಿಕೆಯಾಗಿರುವುದಾಗಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಈವರೆಗೆ 131 ಸೋಂಕಿತರ ಪೈಕಿ 58 ಜನರು ಗುಣಮುಖರಾಗಿದ್ದಾರೆ. 67 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ, 42 ಕಂಟೈನ್ಮೆಂಟ್ ವಾರ್ಡ್ಗಳ ಪೈಕಿ 18 ವಾರ್ಡ್ಗಳು ಹೊರಗೆ ಬಂದಿವೆ. ಈ ಮೂಲಕ ಬಿಬಿಎಂಪಿ ವ್ಯಾಪ್ತಿಯಲ್ಲಿ 24 ವಾರ್ಡ್ ಮಾತ್ರ ಕಂಟೈನ್ಮೆಂಟ್ ವಲಯ ಎಂದು ಅವರು ಹೇಳಿದ್ದಾರೆ.
ಕಂಟೈನ್ಮೆಂಟ್ ವಾರ್ಡ್ಗಳು: ಬೊಮ್ಮನಹಳ್ಳಿ ವಲಯ-2 ವಾರ್ಡ್ಗಳು, ಮಹದೇವಪುರ ವಲಯ- 2 ವಾರ್ಡ್ಗಳು, ಬೆಂಗಳೂರು, ಪೂರ್ವ ವಲಯ- 6 ವಾರ್ಡ್ಗಳು.
ಬೆಂಗಳೂರು ದಕ್ಷಿಣ ವಲಯ- 8 ವಾರ್ಡ್ಗಳು.
ಬೆಂಗಳೂರು ಪಶ್ಚಿಮ ವಲಯ- 5 ವಾರ್ಡ್ಗಳು.
ರಾಜರಾಜೇಶ್ವರಿನಗರ ವಲಯ- 1 ವಾರ್ಡ್.





