Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಹಿರಿಯ ಬಾಲಿವುಡ್ ನಟ ರಿಷಿ ಕಪೂರ್ ನಿಧನ

ಹಿರಿಯ ಬಾಲಿವುಡ್ ನಟ ರಿಷಿ ಕಪೂರ್ ನಿಧನ

ವಾರ್ತಾಭಾರತಿವಾರ್ತಾಭಾರತಿ30 April 2020 9:57 AM IST
share
ಹಿರಿಯ ಬಾಲಿವುಡ್ ನಟ ರಿಷಿ ಕಪೂರ್ ನಿಧನ

ಮುಂಬೈ, ಎ.30: ಹಿರಿಯ ಬಾಲಿವುಡ್ ನಟ ರಿಷಿ ಕಪೂರ್ (67) ಅವರು ಗುರುವಾರ ಬೆಳಿಗ್ಗೆ ಇಲ್ಲಿ ನಿಧನರಾದರು. ಅವರು ಪತ್ನಿ ನೀತು ಸಿಂಗ್ ಕಪೂರ್, ಪುತ್ರ ರಣಬೀರ್ ಕಪೂರ್ ಮತ್ತು ಪುತ್ರಿ ರಿದ್ದಿಮಾ ಕಪೂರ್, ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.

2018ರಿಂದಲೂ ಕ್ಯಾನ್ಸರ್ ಮಹಾಮಾರಿಯ ವಿರುದ್ಧ ಹೋರಾಡುತ್ತಿದ್ದ ರಿಷಿ ಒಂದು ವರ್ಷ ನ್ಯೂಯಾರ್ಕ್‌ನಲ್ಲಿ ಚಿಕಿತ್ಸೆ ಪಡೆದು,   2019ರ ಸೆಪ್ಟೆಂಬರ್‌ನಲ್ಲಿ ಭಾರತಕ್ಕೆ ಮರಳಿದ್ದರು. ಉಸಿರಾಟದ ಸಮಸ್ಯೆಯಿಂದಾಗಿ ಬುಧವಾರ ಅವರನ್ನು ಇಲ್ಲಿಯ ಎಚ್‌ಎನ್ ರಿಲಯನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು,ಗುರುವಾರ ಬೆಳಿಗ್ಗೆ ಚಿರನಿದ್ರೆಗೆ ಜಾರಿದ್ದಾರೆ.

‘ನಮ್ಮ ಪ್ರೀತಿಯ ರಿಷಿ ಕಪೂರ್ ಅವರು ಲ್ಯುಕೇಮಿಯಾ ವಿರುದ್ಧ ಎರಡು ವರ್ಷಗ ಳ ಹೋರಾಟದ ಬಳಿಕ ಇಂದು ಬೆಳಿಗ್ಗೆ 8:45ಕ್ಕೆ ಆಸ್ಪತ್ರೆಯಲ್ಲಿ ಶಾಂತಿಯಿಂದ ಕೊನೆಯುಸಿರೆಳೆದಿದ್ದಾರೆ. ಅವರು ಕೊನೆಯ ಕ್ಷಣದವರೆಗೂ ತಮ್ಮನ್ನು ನಗಿಸುತ್ತಲೇ ಇದ್ದರು ಎಂದು ಆಸ್ಪತ್ರೆಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗಳು ಹೇಳಿದ್ದಾರೆ ’ಎಂದು ಹೇಳಿಕೆಯಲ್ಲಿ ತಿಳಿಸಿರುವ ಕಪೂರ್ ಕುಟುಂಬವು,ಎರಡು ವರ್ಷಗಳ ಚಿಕಿತ್ಸೆಯುದ್ದಕ್ಕೂ ಖುಷಿಯಿಂದಲೇ ಇದ್ದ ರಿಷಿ ಬದುಕುವ ದೃಢನಿರ್ಣಯವನ್ನು ಹೊಂದಿದ್ದರು. ಅನಾರೋಗ್ಯವು ತನ್ನ ಒಳ್ಳೆಯ ವ್ಯಕ್ತಿತ್ವವನ್ನು ಕಿತ್ತುಕೊಳ್ಳಲು ಅವರು ಅವಕಾಶ ನೀಡಿರಲಿಲ್ಲ. ವಿಶ್ವಾದ್ಯಂತದ ತನ್ನ ಅಭಿಮಾನಿಗಳಿಂದ ಹರಿದು ಬಂದಿದ್ದ ಪ್ರೀತಿಗೆ ಅವರು ಋಣಿಯಾಗಿದ್ದರು. ತನ್ನನ್ನು ಮುಗುಳ್ನಗುವಿನೊಂದಿಗೆ ಸ್ಮರಿಸಿಕೊಳ್ಳಬೇಕು,ಕಂಬನಿಗಳೊಂದಿಗಲ್ಲ ಎಂದು ಅವರು ಬಯಸುತ್ತಾರೆ ಎನ್ನುವುದನ್ನು ಈ ಅಗಲಿಕೆಯ ಸಂದರ್ಭದಲ್ಲಿ ಅವರ ಅಭಿಮಾನಿಗಳು ಅರ್ಥ ಮಾಡಿಕೊಳ್ಳುತ್ತಾರೆ ಎಂದು ಹೇಳಿದೆ.

“ನಟನೆ ನನ್ನ ರಕ್ತದಲ್ಲಿಯೇ ಇದೆ”

ಐದು ದಶಕಗಳ ತನ್ನ ವೃತ್ತಿ ಜೀವನದಲ್ಲಿ ರಿಷಿ ಪ್ರತಿಯೊಬ್ಬ ಖ್ಯಾತ ನಿರ್ದೇಶಕರು ಮತ್ತು ತಾರೆಯರೊಂದಿಗೆ ಕೆಲಸ ಮಾಡಿದ್ದರು. ರಾಜ್ ಕಪೂರ್ ಅವರ ಪುತ್ರ ಹಾಗೂ ಪೃಥ್ವಿರಾಜ ಕಪೂರ್ ಅವರ ಮೊಮ್ಮಗನಾಗಿದ್ದ ರಿಷಿ 1950ರ ದಶಕದಲ್ಲಿ ಬಾಲನಟನಾಗಿ ಮೊದಲ ಬಾರಿಗೆ ತೆರೆಯ ಮೇಲೆ ಕಾಣಿಸಿಕೊಂಡಿದ್ದರು. 1970ರಲ್ಲಿ ತನ್ನ ತಂದೆಯ ನಿರ್ಮಾಣದ ‘ಮೇರಾ ನಾಮ್ ಜೋಕರ್’ ಚಿತ್ರದಲ್ಲಿ ಹದಿಹರೆಯದ ಬಾಲಕನಾಗಿ ಕಾಣಿಸಿಕೊಂಡಿದ್ದ ಅವರು, 1973ರಲ್ಲಿ ‘ಬಾಬಿ’ ಚಿತ್ರದಲ್ಲಿ ಮೊದಲ ಬಾರಿಗೆ ನಾಯಕ ಪಾತ್ರದಲ್ಲಿ ನಟಿಸಿದ್ದರು. ‘ನಟನೆ ನನ್ನ ರಕ್ತದಲ್ಲಿಯೇ ಇದೆ ಮತ್ತು ಅದರಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ’ಎಂದು ಅವರು ತನ್ನ ಆತ್ಮಕಥೆ ‘ಖುಲ್ಲಂ ಖುಲ್ಲಾ:ರಿಷಿ ಕಪೂರ್ ಅನ್‌ಸೆನ್ಸಾರ್ಡ್’ನಲ್ಲಿ ಬರೆದುಕೊಂಡಿದ್ದಾರೆ.

 ರಫೂ ಚಕ್ಕರ್,ಕರ್ಝ್,ಖೇಲ್ ಖೇಲ್ ಮೆ,ಸರಗಮ್,ಅಮರ ಅಕ್ಬರ್ ಅಂತೋನಿ, ನಸೀಬ್, ಸಾಗರ್, ಪ್ರೇಮರೋಗ,ಚಾಂದ್ನಿ,ಬೋಲ್ ರಾಧಾ ಬೋಲ್ ಮತ್ತು ದಾಮಿನಿ ಇವು ಅವರು ನಟಿಸಿದ್ದ ಕೆಲವು ಖ್ಯಾತ ಚಿತ್ರಗಳು.

ಇತ್ತೀಚಿನ ವರ್ಷಗಳಲ್ಲಿ ದಿಲ್ಲಿ-6, ಅಗ್ನಿಪಥ್, ಲವ್ ಆಜ್ ಕಲ್,

ಕಪೂರ್ ಆ್ಯಂಡ್ ಸನ್ಸ್ ಮತ್ತು ಮುಲ್ಕ್ ಚಿತ್ರಗಳಲ್ಲಿನ ತನ್ನ ಅಭಿನಯಕ್ಕಾಗಿ ಪ್ರಶಂಸಿಸಲ್ಪಟ್ಟಿದ್ದ ರಿಷಿ, 2019ರಲ್ಲಿ ಝೂಠಾ ಕಹೀಂ ಕಾ ಮತ್ತು ದಿ ಬಾಡಿ ಚಿತ್ರಗಳಲ್ಲಿ ನಟಿಸಿದ್ದರು. ನ್ಯೂಯಾರ್ಕ್‌ನಿಂದ ಮರಳಿದ ಬಳಿಕ ಮತ್ತೆ ಸಕ್ರಿಯರಾಗಿದ್ದ ಅವರು ಕಳೆದ ಫೆಬ್ರವರಿಯಲ್ಲಿ ದಿಲ್ಲಿಯಲ್ಲಿ ‘ಶರ್ಮಾಜಿ ನಮ್ಕೀನ್ ’ಹಾಸ್ಯಚಿತ್ರದ ಕೆಲವು ದೃಶ್ಯಗಳ ಶೂಟಿಂಗ್‌ನಲ್ಲಿ ಭಾಗಿಯಾಗಿದ್ದರು. ಹಾಲಿವುಡ್ ಹಾಸ್ಯಚಿತ್ರ ‘ದಿ ಇಂಟರ್ನ್’ನ ಹಿಂದಿ ರಿಮೇಕ್‌ನಲ್ಲಿ ಅಭಿನಯಿಸಲು ಸಜ್ಜಾಗಿದ್ದ ಅವರು,ರಾಬರ್ಟ್ ಡಿ ನೀರೊ ಅವರು ವಹಿಸಿದ್ದ ಪಾತ್ರವನ್ನು ನಿರ್ವಹಿಸಲಿದ್ದರು.

ಸಂತಾಪಗಳ ಮಹಾಪೂರ

ಈ ಮೇರುನಟನ ಸಾವಿನ ಸುದ್ದಿ ಹೊರಬೀಳುತ್ತಿದ್ದಂತೆ ಸಂತಾಪಗಳ ಮಹಾಪೂರವೇ ಹರಿದು ಬರುತ್ತಿದೆ. ರಿಷಿ ಕಪೂರ್ ಅವರ ನಿಧನ ತನ್ನನ್ನು ದುಃಖಿತನನ್ನಾಗಿಸಿದೆ ಎಂದಿರುವ ಪ್ರಧಾನಿ ನರೇಂದ್ರ ಮೋದಿ ಅವರು, ದಿವಂಗತ ನಟನ ಕುಟುಂಬ ಮತ್ತು ಅಭಿಮಾನಿಗಳಿಗೆ ಸಂತಾಪಗಳನ್ನು ಸೂಚಿಸಿದ್ದಾರೆ. ‘ರಿಷಿ ಕಪೂರ್‌ಜಿ ಅವರು ಬಹುಮುಖಿ,ಲವಲವಿಕೆಯ ಮತ್ತು ಜೀವಂತಿಕೆಯ ವ್ಯಕ್ತಿತ್ವವಾಗಿದ್ದರು. ಅವರು ಪ್ರತಿಭೆಯ ಆಗರವಾಗಿದ್ದರು. ನಮ್ಮ ಸಂವಾದಗಳನ್ನು,ಸಾಮಾಜಿಕ ಜಾಲತಣದಲ್ಲಿಯೂ ಸಹ ನಾನು ಸದಾ ನೆನಪಿಸಿಕೊಳ್ಳುತ್ತಿರುತ್ತೇನೆ. ಅವರು ಚಿತ್ರರಂಗ ಮತ್ತು ಭಾರತದ ಪ್ರಗತಿಯ ಬಗ್ಗೆ ತುಂಬ ಉತ್ಸುಕತೆ ಹೊಂದಿದ್ದರು’ ಎಂದು ಮೋದಿ ಟ್ವೀಟಿಸಿದ್ದಾರೆ.

‘ಪ್ರತಿಭಾವಂತ ನಟರಾಗಿದ್ದ ರಿಷಿ ಕಪೂರ್ ಹಲವಾರು ಪಾತ್ರಗಳಿಗೆ ತನ್ನದೇ ಆದ ಛಾಪು ನೀಡಿದ್ದರು ಮತ್ತು ತನ್ನ ರೊಮ್ಯಾಂಟಿಕ್ ಚಿತ್ರಗಳಿಂದ ಜನಪ್ರಿಯರಾಗಿದ್ದರು. ಅವರ ನಿಧನದಿಂದ ದುಃಖವಾಗಿದೆ. ಅವರ ಸಾವಿನಿಂದಾಗಿ ದೇಶವು ತನ್ನ ಪ್ರೀತಿಯ ಪುತ್ರನನ್ನು ಮತ್ತು ಚಿತ್ರಂಗವು ವಜ್ರವೊಂದನ್ನು ಕಳೆದುಕೊಂಡಿವೆ ’ಎಂದು ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಟ್ವೀಟಿಸಿದ್ದಾರೆ.

ರಿಷಿ ನಿಧನದ ಸುದ್ದಿ ತನ್ನನ್ನು ಉಧ್ವಸ್ತಗೊಳಿಸಿದೆ ಎಂದು ಹಿರಿಯ ನಟ ಅಮಿತಾಭ್ ಬಚ್ಚನ್ ಹೇಳಿದ್ದರೆ,ಕಪೂರ್ ನಿಧನ ದೇಶಕ್ಕೆ ದೊಡ್ಡ ನಷ್ಟವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಶೋಕ ವ್ಯಕ್ತಪಡಿಸಿದ್ದಾರೆ.

ರಿಷಿ ಸಾವು ಚಿತ್ರರಂಗಕ್ಕೆ ಎರಡೇ ದಿನಗಳಲ್ಲಿ ಎರಡನೇ ದೊಡ್ಡ ಆಘಾತವಾಗಿದೆ. ಬುಧವಾರವಷ್ಟೇ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಬಾಲಿವುಡ್‌ನ ಇನ್ನೋರ್ವ ಖ್ಯಾತನಟ ಇರ್ಫಾನ್ ಖಾನ್ (53) ನಿಧನರಾಗಿದ್ದರು.

ದಿಲ್ಲಿ ಟು ಮುಂಬೈ: ಪುತ್ರಿ ರಿದ್ದಿಮಾ ಕಾರಿನಲ್ಲಿ ಪ್ರಯಾಣ

ದೇಶವ್ಯಾಪಿ ಲಾಕಡೌನ್ ನಡುವೆ ತನ್ನ ತಂದೆಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ರಿಷಿ ಪುತ್ರಿ ರಿದ್ದಿಮಾ ಕಪೂರ್ ಸೇನ್ ಅವರಿಗೆ ದಿಲ್ಲಿಯಿಂದ 1,400 ಕಿ.ಮೀ.ದೂರದ ಮುಂಬೈಗೆ ರಸ್ತೆ ಮಾರ್ಗವಾಗಿ ಪ್ರಯಾಣಿಸಲು ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಕೈಗಾರಿಕೋದ್ಯಮಿಯನ್ನು ವಿವಾಹವಾಗಿರುವ ರಿದ್ದಿಮಾ ದಿಲ್ಲಿಯಲ್ಲಿ ವಾಸವಿದ್ದಾರೆ.

ತನ್ನ ತಂದೆಯ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದ ತಕ್ಷಣ ಮುಂಬೈಗೆ ಬಾಡಿಗೆ ವಿಮಾನದಲ್ಲಿ ಪ್ರಯಾಣಿಸಲು ಅನುಮತಿಗಾಗಿ ರಿದ್ದಿಮಾ ಬುಧವಾರ ರಾತ್ರಿ ಕೇಂದ್ರ ಗೃಹಸಚಿವಾಲಯವನ್ನು ಕೋರಿದ್ದರಾದರೂ ಗೃಹಸಚಿವ ಅಮಿತ್ ಶಾ ಅವರು ಮಾತ್ರ ಅನುಮತಿಯನ್ನು ನೀಡಬಹುದು ಎಂದು ಅವರಿಗೆ ತಿಳಿಸಲಾಗಿತ್ತೆನ್ನಲಾಗಿದೆ. ಪರ್ಯಾಯ ಆಯ್ಕೆಗಾಗಿ ತಡರಾತ್ರಿ ರಸ್ತೆ ಮೂಲಕ ಮುಂಬೈಗೆ ಪ್ರಯಾಣಿಸಲು ಅನುಮತಿಗಾಗಿ ಪೊಲೀಸರನ್ನು ಕೋರಿದ್ದು,ಅವರು ತಕ್ಷಣವೇ ಸ್ಪಂದಿಸಿದ್ದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X