ಮೇ 1ರಿಂದ ಎಸ್ಸೆಸ್ಸೆಫ್‌ನಿಂದ ಆನ್‌ಲೈನ್ ತರ್ತೀಲ್ ಸ್ಪರ್ಧೆಗಳು

ಮಂಗಳೂರು, ಎ.30: ಲಾಕ್‌ಡೌನ್‌ನ ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ರಾಜ್ಯ ವಿಸ್ಡಂ ಹಾಗೂ ಕ್ಯಾಂಪಸ್ ವಿಭಾಗಗಳಿಂದ ಕ್ಯಾಂಪಸ್ ವಿದ್ಯಾರ್ಥಿಗಳಿಗೆ ತರ್ತೀಲ್ ಆನ್‌ಲೈನ್ ಸ್ಪರ್ಧೆಗಳು ಮೇ 1 ರಿಂದ ಮೇ 25ರವರೆಗೆ ಹಮ್ಮಿಕೊಳ್ಳಲಾಗಿದೆ.
ಸ್ಪರ್ಧೆಗಳು ಯೂನಿಟ್, ಡಿವಿಜನ್, ರೆನ್, ಜಿಲ್ಲಾ, ರಾಜ್ಯ ಮಟ್ಟದಲ್ಲಿ ಜೂನಿಯರ್ ಹಾಗೂ ಸೀನಿಯರ್ ವಿಭಾಗಗಳಲ್ಲಿ ನಡೆಯಲಿದೆ. ಯೂನಿಟ್ ಮಟ್ಟದಲ್ಲಿ ಮೇ 1ರಿಂದ 5, ಡಿವಿಜನ್ ಮಟ್ಟ ಮೇ 6ರಿಂದ 10, ರೆನ್ ಮಟ್ಟ ಮೇ 11ರಿಂದ 15, ಜಿಲ್ಲಾ ಮಟ್ಟ ಮೇ 16ರಿಂದ 19 ಹಾಗೂ ರಾಜ್ಯ ಮಟ್ಟದ ತರ್ತೀಲ್ ಮೇ 21ರಂದು ನಡೆಯಲಿದೆ ಎಂದು ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story





