ಏಳನೇ ವರ್ಷದ ಸಂಭ್ರಮದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು
ಮಂಗಳೂರು: ಸಂಕಷ್ಟದ ಸಮಯದಲ್ಲಿ ರಕ್ತದ ಬೇಡಿಕೆಯ ಕರೆಗೆ ಸ್ಪಂದಿಸುತ್ತಾ ಕಾರ್ಯ ನಿರ್ವಹಿಸುತ್ತಿರುವ ಬ್ಲಡ್ ಡೋನರ್ಸ್ ಮಂಗಳೂರು (ರಿ) ಏಳನೇ ವರ್ಷಕ್ಕೆ ಕಾಲಿಟ್ಟಿದೆ.
ದಕ್ಷಿಣ ಕನ್ನಡ ಜಿಲ್ಲೆಯಿಂದ ಕೊಲ್ಲಿ ರಾಷ್ಟ್ರದವರೆಗೂ ತನ್ನ ಕಾರ್ಯ ಚಟುವಟಿಕೆಯನ್ನು ವಿಸ್ತರಿಸಿರುವ ಬ್ಲಡ್ ಡೋನರ್ಸ್, ಯಾವುದೇ ತುರ್ತು ಸಂಧರ್ಭಗಳಲ್ಲೂ ರಕ್ತದ ಬೇಡಿಕೆಯನ್ನು ಪೂರೈಸುತ್ತಿದೆ. ಸುಮಾರು ನಲವತ್ತಕ್ಕಿಂತಲೂ ಅಧಿಕ ವಾಟ್ಸಾಪ್ ಗ್ರೂಪುಗಳಲ್ಲಿ ಹತ್ತು ಸಾವಿರಕ್ಕೂ ಅಧಿಕ ಸದಸ್ಯರನ್ನೊಳಗೊಂಡಿರುವ ಈ ತಂಡವು 7 ವರ್ಷಗಳಿಂದ ಕಾರ್ಯಾಚರಿಸುತ್ತಿದೆ.
ಅಗತ್ಯ ಸಂದರ್ಭಕ್ಕನುಸಾರವಾಗಿ ಜನರ ಮಧ್ಯೆ ಬೆರೆತು ಜನಸೇವಕರಾಗಲು ಅಣುವು ಮಾಡಿಕೊಟ್ಟ ಪ್ರತಿಯೊಬ್ಬ ಪ್ರೋತ್ಸಾಹಕರಿಗೂ ,ರಕ್ತ ನಿಧಿಗಳ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗ ಹಾಗೂ ರಕ್ತದಾನ ಶಿಬಿರಗಳ ಆಯೋಜಕರುಗಳಿಗೂ ನಾವೆಂದೂ ಚಿರಋಣಿ. ದಿನದ 24 ತಾಸುಗಳಲ್ಲೂ ರಕ್ತದ ಬೇಡಿಕೆಗೆ ಸ್ಪಂದಿಸುತ್ತಾ ಕ್ಷಣ ಮಾತ್ರದಲ್ಲಿ ಪೂರಕ ವ್ಯವಸ್ಥೆಯನ್ನು ಕಲ್ಪಿಸಿಕೊಡುವ ಈ ಸಂಸ್ಥೆಯ ಮೇಲೆ ತಮ್ಮೆಲ್ಲರ ಆಶೀರ್ವಾದ ಪ್ರಾರ್ಥನೆ ಸದಾ ಇರಲಿ ಎಂದು ಬ್ಲಡ್ ಡೋನರ್ಸ್ ಮಂಗಳೂರು(ರಿ) ಮಾಧ್ಯಮ ವಿಭಾಗ ಪ್ರಕಟನೆಯಲ್ಲಿ ಕೋರಿದೆ.







