ಪತ್ನಿ ಕೊರೋನ ಪಾಸಿಟಿವ್ ಎಂದು ತಿಳಿಯುತ್ತಲೇ ಆತ್ಮಹತ್ಯೆ ಮಾಡಿಕೊಂಡ ಪತಿ
ಹೊಸದಿಲ್ಲಿ: ತನ್ನ ಪತ್ನಿ ಕೊರೋನವೈರಸ್ ಪಾಸಿಟಿವ್ ಎಂದು ತಿಳಿದ ರಾತ್ರಿಯೇ ಆಕೆಯ 54 ವರ್ಷದ ಪತಿ ಮನೆಯಲ್ಲಿ ಸೀಲಿಂಗ್ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರ್ಗಾಂವ್‍ನಲ್ಲಿ ಬುಧವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಯಾವುದೇ ಸುಸೈಡ್ ನೋಟ್ ಬರೆದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿ ಸತ್‍ಬೀರ್ ಸಿಂಗ್‍ನ ಪತ್ನಿ ಕೆಲ ದಿನಗಳಿಂದ ಅಸೌಖ್ಯಪೀಡಿತರಾಗಿದ್ದರು ಹಾಗೂ ನಗರದ ಖಾಸಗಿ ಆಸ್ಪತ್ರೆಗೆ ಆಕೆಯನ್ನು ದಾಖಲಿಸಲಾಗಿತ್ತು. ಬುಧವಾರ ಸಂಜೆ ಆಕೆಯ ಕೊರೋನ ಪರೀಕ್ಷೆ ಪಾಸಿಟಿವ್ ಆಗಿತ್ತು.
ಘಟನೆ ನಡೆದ ಸಂದರ್ಭ ಆತನ ಪುತ್ರ ಹಾಗೂ ಸೊಸೆ ಮನೆಯಲ್ಲಿದ್ದರು.
Next Story