ರಾಜ್ಯದಲ್ಲಿ ಗುರುವಾರ 30 ಮಂದಿಗೆ ಕೊರೋನ ಸೋಂಕು ದೃಢ
ಬೆಳಗಾವಿಯಲ್ಲಿ 14, ಬೆಂಗಳೂರು ನಗರದಲ್ಲಿ 10 ಪಾಸಿಟಿವ್ ಪ್ರಕರಣಗಳು

ಸಾಂದರ್ಭಿಕ ಚಿತ್ರ
ಬೆಂಗಳೂರು, ಎ.30: ರಾಜ್ಯದಲ್ಲಿ ಇಂದು ಮತ್ತೆ 30 ಮಂದಿಯಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 565ಕ್ಕೇರಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಇಂದು ಸಂಜೆ ಬಿಡುಗಡೆಗೊಳಿಸಿರುವ ಆರೋಗ್ಯ ಬುಲೆಟ್ನಲ್ಲಿ ಬುಧವಾರ ಸಂಜೆ 5ರಿಂದ ಇಂದು ಸಂಜೆ 5 ಗಂಟೆಯೊಳಗೆ ಹೊಸ 30 ಪ್ರಕರಣಗಳು ವರದಿಯಾಗಿರುವುದಾಗಿ ತಿಳಿಸಿದೆ.
ಈ ಪೈಕಿ ಬೆಳಗಾವಿಯಲ್ಲಿ 8 ವರ್ಷದ ಬಾಲಕಿ, 9 ವರ್ಷದ ಬಾಲಕನಿಗೆ ಸೇರಿ ಒಟ್ಟು 14 ಪ್ರಕರಣಗಳು, ಬೆಂಗಳೂರು ನಗರದಲ್ಲಿ 4 ವರ್ಷದ ಬಾಲಕಿಗೆ ಸೇರಿ ಒಟ್ಟು 10 ಪ್ರಕರಣಗಳು ಪತ್ತೆಯಾಗಿವೆ. ಉಳಿದಂತೆ ವಿಜಯಪುರದಲ್ಲಿ ಎರಡು, ದಾವಣಗೆರೆ, ದಕ್ಷಿಣ ಕನ್ನಡ, ತುಮಕೂರು ಹಾಗೂ ಕಲಬುರಗಿಯಲ್ಲಿ ತಲಾ ಒಂದು ಪ್ರಕರಣ ದೃಢಪಟ್ಟಿದೆ.
ಒಟ್ಟಾರೆ ಇದುವರೆಗೆ ರಾಜ್ಯದಲ್ಲಿ ಪಾಸಿಟಿವ್ ಬಂದ 565 ಪ್ರಕರಣಗಳಲ್ಲಿ 229 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. 21 ಮಂದಿ ಮೃತಪಟ್ಟಿದ್ದಾರೆ.
Next Story





