ಮೇ 1ರಿಂದ ಕಣಚೂರು ಆಸ್ಪತ್ರೆಯಲ್ಲಿ ಹೊರರೋಗಿ, ಸಾಮಾನ್ಯ ವೈದ್ಯಕೀಯ ವಿಭಾಗ ಪುನರಾರಂಭ

ಮಂಗಳೂರು : ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನಾಟೆಕಲ್ ನೋವೆಲ್ ಕೊರೋನ ವೈರಸ್ (ಕೋವಿಡ್-19) ಹರಡುವುದನ್ನು ನಿಯಂತ್ರಿಸುವುದಕ್ಕಾಗಿ ನಿಲ್ಲಿಸಲಾದ ಹೊರ ರೋಗಿ, ಸಾಮಾನ್ಯ ವೈದ್ಯಕೀಯ ವಿಭಾಗವು ಮೇ 1ರಿಂದ ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ಪುನರಾರಂಭಗೊಳ್ಳುತ್ತವೆ ಎಂದು ತಿಳಿಸಿದೆ.
ಇವುಗಳಲ್ಲಿ ತುರ್ತು ಮತ್ತು ವಿಶೇಷ ತಜ್ಞ ಸೇವೆಗಳು ಲಭ್ಯವಿರುತ್ತವೆ. ಕರೋನ ರೋಗದ ಮುಂಜಾಗ್ರತೆಯಿಂದ ಆಸ್ಪತ್ರೆಗೆ ಬರುವ ಎಲ್ಲಾ ರೋಗಿಗಳು ಮತ್ತು ರೋಗಿಗಳೊಂದಿಗೆ ಬರುವ ಸಂಬಂಧಿಕರು ಆಸ್ಪತ್ರೆ ಒಳಗೆ ಪ್ರವೇಶಿಸುವ ಮೊದಲು ಜ್ವರ ತಪಾಸಣೆ (Fever Clinic) ಕೇಂದ್ರದಲ್ಲಿ ತಪಾಸಣೆ ಮಾಡಿಸಿ ಅಲ್ಲಿ ನೀಡುವಂತಹ ರಶೀದಿಯನ್ನು ಪಡೆದುಕೊಂಡು ಒಳ ಬರತಕ್ಕದ್ದು. ನಿಮ್ಮ ತೊಂದರೆ ಮತ್ತು ಅನಿಸಿಕೆಗಳನ್ನು ವೈದ್ಯರೊಂದಿಗೆ ವಿವರಿಸಿ ಮಾಹಿತಿ ಪಡೆದುಕೊಳ್ಳಬೇಕು.
ಒಬ್ಬ ರೋಗಿಯೊಂದಿಗೆ ಒಬ್ಬ ಜೊತೆಗಾರ/ಜೊತೆಗಾರ್ತಿಗೆ(ಸಂಬಂಧಿಕರು) ಮಾತ್ರ ಅವಕಾಶ, ಒಳಗೆ ಬರುವ ಸಂದಂರ್ಭ ಮುಖಕ್ಕೆ ಮಾಸ್ಕ್ (ಮುಖ ರಕ್ಷಾ ಕವಚ)ನ್ನು ಕಡ್ಡಾಯವಾಗಿ ಧರಿಸಬೇಕು.
ಸುರಕ್ಷಿತ ಅಂತರ ಕಾಪಾಡಿಕೊಳ್ಳುವುದು ಅತ್ಯಗತ್ಯ, ನಿಯಮಗಳ ಪರಿಪಾಲನೆ, ಶಾಂತತೆಯನ್ನು ಕಾಪಾಡಿಕೊಳ್ಳಬೇಕು. ರೋಗಿಗಳು ಆಸ್ಪತ್ರೆಗೆ ಬರು ವಂತಹ ಎಲ್ಲಾ ಸಮಯದಲ್ಲೂ ಆದಾರ್ ಕಾರ್ಡ್ ಕಡ್ಡಾಯವಾಗಿ ತರತಕ್ಕದ್ದು. ನೀವು ಸಂಪರ್ಕ ವಲಯದಿಂದ ಬಂದಿದ್ದರೆ ಅಥವಾ ಮನೆ ಪ್ರತ್ಯೇಕತೆ (Home quarantine) ಖಾತರಿಪಡಿಸಿ ಆಸ್ಪತ್ರೆಗೆ ಭೇಟಿ ನೀಡಿದ ಸಮಯದಲ್ಲಿ ವೈದ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ನಾಟೆಕಲ್ ತಿಳಿಸಿದೆ.
ಕರೋನ-19(COVID-19) ಬಗ್ಗೆ ಅರಿಯಲು, ರಾಜ್ಯ ಮತ್ತು ಜಿಲ್ಲಾ ಆರೋಗ್ಯ ಇಲಾಖೆಗಳ ನಿಖಟ ಸಂಪರ್ಕದೊಂದಿಗೆ ಕಾರ್ಯನಿರ್ವಹಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಒಳ ರೋಗಿಗಳಾಗಿ ಬರುವಂತಹ ಎಲ್ಲಾ ರೋಗಿಗಳಿಗೆ ಉಚಿತ ಅಂಬ್ಯುಲೇನ್ಸ್ ಸೇವೆ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ 0824-2888000 ಕರೆ ಮಾಡಲು ಪ್ರಕಟನೆ ತಿಳಿಸಿದೆ.







