Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ತಾಯಂದಿರೇಕೆ ಮಕ್ಕಳನ್ನು ಎಡಗಡೆಯೇ...

ತಾಯಂದಿರೇಕೆ ಮಕ್ಕಳನ್ನು ಎಡಗಡೆಯೇ ಎತ್ತಿಕೊಂಡಿರುತ್ತಾರೆ?

ಇದರ ಹಿಂದಿನ ವಿಜ್ಞಾನದ ಮಾಹಿತಿಯಿಲ್ಲಿದೆ

ವಾರ್ತಾಭಾರತಿವಾರ್ತಾಭಾರತಿ30 April 2020 8:36 PM IST
share

ತಾಯಂದಿರು ತಮ್ಮ ಕರುಳಕುಡಿಗಳನ್ನು ಎಡತೋಳಿನಲ್ಲಿ ಅಥವಾ ಎಡಸೊಂಟದಲ್ಲಿ ಎತ್ತಿಕೊಂಡಿರುವುದು ಸಾಮಾನ್ಯ ದೃಶ್ಯವಾಗಿದೆ. ತಾಯಂದಿರು ಮಾತ್ರವಲ್ಲ, ಸಾಮಾನ್ಯವಾಗಿ ಮಕ್ಕಳನ್ನು ಎತ್ತಿಕೊಳ್ಳುವ ಎಲ್ಲರೂ ಇದೇ ಸಂಪ್ರದಾಯವನ್ನು ಪಾಲಿಸುತ್ತಾರೆ. ಅದೇಕೆ ಮಕ್ಕಳನ್ನು ಬಲಗಡೆಯಲ್ಲಿ ಎತ್ತಿಕೊಂಡಿರುವುದಿಲ್ಲ? ಇಂತಹ ಪ್ರಶ್ನೆ ಎಷ್ಟು ಜನರಿಗೆ ಕಾಡಿದೆಯೋ ಗೊತ್ತಿಲ್ಲ. ಆದರೆ ವೈಜ್ಞಾನಿಕ ಸಂಶೋಧನೆ ಈ ಪ್ರಶ್ನೆಗೆ ಉತ್ತರವನ್ನು ನೀಡಿದೆ.

‘ನ್ಯೂರೊಸೈನ್ಸ್ ಆ್ಯಂಡ್ ಬಯೊಬಿಹೇವಿರಲ್ ಜರ್ನಲ್’ನಲ್ಲಿ ಪ್ರಕಟವಾಗಿರುವ ಸಂಶೋಧನಾ ವರದಿಯಂತೆ,ಹೆಚ್ಚಿನ ಶಿಶುಗಳನ್ನು ಹೆತ್ತವರು ತಮ್ಮ ಎಡ ಹೆಗಲ ಮೇಲೆ ಹಾಕಿಕೊಂಡು ನಿದ್ರಿಸುವಂತೆ ಮಾಡುತ್ತಾರೆ. ಹೆತ್ತವರು ತಮ್ಮ ಬಲಗೈ ಮುಕ್ತವಾಗಿರುತ್ತದೆ ಎಂಬ ಕಾರಣಕ್ಕೆ ಹೀಗೆ ಮಾಡುವುದಿಲ್ಲ,ಆದರೆ ಅವರ ಮಿದುಳು ಹಾಗೆ ಮಾಡುವಂತೆ ಅವರನ್ನು ಪ್ರಚೋದಿಸುತ್ತದೆ.

1960ರಿಂದಲೇ ಜರ್ಮನಿಯಲ್ಲಿನ ಕೆಲವು ಸಂಶೋಧಕರು ವಿಶ್ವದ ಹೆಚ್ಚಿನ ಜನರು ಎಡಚರಲ್ಲವಾದರೂ ಕೆಲವು ಕೆಲಸಗಳನ್ನು ಎಡಗೈಯಿಂದ ಮಾತ್ರ ಏಕೆ ಮಾಡುತ್ತಾರೆ ಎಂಬ ಆಸಕ್ತಿಕರ ವಿಷಯದ ಹಿಂದೆ ಬಿದ್ದಿದ್ದರು. ವಿಶ್ವದ ಹೆಚ್ಚಿನ ಜನರು ನೈಸರ್ಗಿಕವಾಗಿ ಬಲಗೈ ಬಳಸುವವರಾದರೂ ಮಕ್ಕಳನ್ನು ಮಾತ್ರ ಎಡತೋಳಿನಲ್ಲಿ ಅಥವಾ ಎಡಹೆಗಲಿನಲ್ಲಿ ಎತ್ತಿಕೊಳ್ಳುವ ವಿಷಯವೂ ಇದೇ ಆಗಿದೆ. ಸಂಶೋಧಕರು ಇಂತಹ 40 ಪ್ರಕರಣಗಳನ್ನು ತಮ್ಮ ಅಧ್ಯಯನಕ್ಕೊಳಪಡಿಸಿದ್ದರು. ಅವರಲ್ಲಿ ಶೇ.72ರಷ್ಟು ಜನರು ಎಡಚರಲ್ಲದಿದ್ದರೂ ಮಕ್ಕಳನ್ನು ತಮ್ಮ ಎಡಹೆಗಲ ಮೇಲೆಯೇ ಇಟ್ಟುಕೊಳ್ಳುತ್ತಿದ್ದರು. ಸಂಶೋಧಕರು ಬಳಿಕ ಈ ಜನರನ್ನು ಅವರ ಮಿದುಳಿನ ವಿವಿಧ ಭಾಗಗಳಿಗೆ ಸಂಪರ್ಕಿಸುವ ಮೂಲಕ ಅವರ ಕಾರ್ಯಗಳನ್ನು ಪರಿಶೀಲಿಸಿದ್ದರು. ಮಿದುಳಿನ ಎಡಭಾಗವು ಈ ಜನರು ಮಾಡುವ ಎಲ್ಲ ಭಾವನಾತ್ಮಕ ಕೆಲಸಗಳನ್ನು ನಿರ್ವಹಿಸುತ್ತದೆ ಎನ್ನುವುದು ಈ ವೇಳೆ ಅವರಿಗೆ ತಿಳಿದುಬಂದಿತ್ತು. ಮಿದುಳಿನ ಬಲಗೋಳಾರ್ಧವು ಪ್ರಾಥಮಿಕವಾಗಿ ಭಾವನೆಗಳನ್ನು ನಿರ್ದೇಶಿಸುವುದರಿಂದ ಜನರು ಮಕ್ಕಳನ್ನು ಆಪ್ತತೆಯನ್ನು ಮೂಡಿಸುವ ಭಾಗದಲ್ಲಿ ಇಟ್ಟುಕೊಳ್ಳುತ್ತಾರೆ. ಇದು ವಿಶೇಷವಾಗಿ ಗರ್ಭದಲ್ಲಿದ್ದಾಗ ಮಗುವಿನೊಂದಿಗೆ ಭಾವನಾತ್ಮಕ ಸಂಬಂಧವನ್ನು ಬೆಳೆಸಿಕೊಂಡಿರುವ ತಾಯಂದಿರ ವಿಷಯದಲ್ಲಿ ಹೆಚ್ಚು ಸ್ಪಷ್ಟವಾಗಿದೆ.

1996ರಲ್ಲಿ ನಡೆಸಿದ್ದ ಇನ್ನೊಂದು ಸಂಶೋಧನೆಯಲ್ಲಿ ಈ ವಿಷಯಕ್ಕೆ ಸಂಬಂಧಿಸಿದಂತೆ ಪುರುಷರನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು, ಹೆಚ್ಚಿನ ಪುರುಷರು ಕೊಂಚ ಅಹಿತ ಭಾವನೆ ಅಥವಾ ಭೀತಿಯನ್ನು ಅನುಭವಿಸಿದಾಗ ಶರೀರದ ಎಡಭಾಗವನ್ನು ಬಳಸುತ್ತಾರೆ ಎನ್ನುವುದು ಈ ಸಂಶೋಧನೆಯಿಂದ ಬೆಳಕಿಗೆ ಬಂದಿತ್ತು. ಇಂತಹ ಸ್ಥಿತಿಯಲ್ಲಿ ಮಗುವಿನ ಬಗ್ಗೆ ಅವರಿಗೆ ಹೆಚ್ಚಿನ ಸಂವೇದನೆಯಿರುವುದರಿಂದ ಮಗುವನ್ನು ಅದಕ್ಕೆ ಅತ್ಯಂತ ಹಿತಕರವಾಗಿರುವಂತೆ ತಬ್ಬಿಕೊಳ್ಳಲು ಸಾಧ್ಯವಾಗುವುದಿಲ್ಲ. ಮಗು ತಮ್ಮ ತೊಡೆಯಲ್ಲಿ ಮಲಗಿದ್ದರೆ ಅದಕ್ಕೆ ಎಚ್ಚರವಾಗದಂತೆ ತುಂಬ ಕಾಳಜಿಯನ್ನು ಪುರುಷರು ವಹಿಸುತ್ತಾರೆ. ಅಲ್ಲದೆ ನಾವು ತುಂಬ ಪ್ರೀತಿಸುವ ವಸ್ತು ನಮ್ಮ ಹೃದಯಕ್ಕೆ ಅತ್ಯಂತ ಹತ್ತಿರವಾಗಿರುತ್ತದೆ ಎನ್ನುವುದು ಮಾನವ ಸೈಕಾಲಜಿಯೂ ಆಗಿದೆ. ಹೀಗಾಗಿ ಹೆತ್ತವರು ಮಕ್ಕಳನ್ನು ತಮ್ಮ ಎಡಭಾಗದಲ್ಲಿ,ಅಂದರೆ ಎಡಭುಜದಲ್ಲಿಯೇ ಇಟ್ಟುಕೊಳ್ಳುತ್ತಾರೆ. ಹೃದಯವೂ ನಮ್ಮ ಶರೀರದ ಎಡಭಾಗದಲ್ಲಿಯೇ ಇರುತ್ತದೆ.

ಇದಲ್ಲದೆ ಮಕ್ಕಳನ್ನು ಎಡಗೈಯಲ್ಲಿ ಹಿಡಿದುಕೊಳ್ಳಲು ಇತರ ಕಾರಣಗಳೂ ಇವೆ.

ಇತರ ಅಧ್ಯಯನಗಳಂತೆ ಪ್ರತಿಯೊಂದು ಮಗುವಿಗೂ ತನ್ನ ತಾಯಿಯ ಹೃದಯಬಡಿತ ಮತ್ತು ಭಾವನೆಗಳು ಚೆನ್ನಾಗಿ ತಿಳಿದಿರುತ್ತದೆ,ಹೀಗಾಗಿ ಅದೂ ಈ ಮಿಡಿತದ ಸಾಮೀಪ್ಯವನ್ನು ಅಂದರೆ ಎಡಭುಜವನ್ನು ಇಷ್ಟ ಪಡುತ್ತದೆ. ಮಗುವನ್ನು ದೇಹದ ಎಡಭಾಗದಲ್ಲಿ ಇಟ್ಟುಕೊಂಡಾಗ ಅದು ಶಾಂತವಾಗುತ್ತದೆ ಮತ್ತು ಭುಜದ ಮೇಲೆ ನಿದ್ರಿಸುತ್ತದೆ.

ನಮ್ಮೆಲ್ಲರಲ್ಲಿಯೂ ಮಿದುಳಿನ ಎಡಭಾಗವು ಭಾಷೆ ಮತ್ತು ಭಾವನಾತ್ಮಕ ಸಂಕೇತಗಳನ್ನು ವ್ಯಾಖ್ಯಾನಿಸುವುದಕ್ಕೆ ಮತ್ತು ಅರ್ಥ ಮಾಡಿಕೊಳ್ಳುವುದಕ್ಕೆ ಹೊಣೆಯಾಗಿರುತ್ತದೆ ಮತ್ತು ಇದು ಮಗುವಿನಲ್ಲಿ ಹೆಚ್ಚಾಗಿ ಕೆಲಸ ಮಾಡುತ್ತದೆ.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X